ಈ ಸಮಯದಲ್ಲಿ ಮೀನುಗಾರರು ಸೇರಿದಂತೆ ಸಾರ್ವಜನಿಕರು ಮೀನುಗಳನ್ನು ಆಯ್ದುಕೊಂಡು ಹೋಗುತ್ತಾರೆ. ಆಳದ ಸಮುದ್ರಕ್ಕೆ ತೆರಳಿದಾಗ ಕೆಲವು ಬಾರಿ ಮೀನು ರಾಶಿಯೇ ಬಲೆಗೆ ಬಿದ್ದಿರುತ್ತವೆ.
2/ 7
ಉಡುಪಿಯ ಮಲ್ಪೆ ಬಂದರಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಮೀನು ಹರಾಜು ಆಗಿದೆ. (ಸಾಂದರ್ಭಿಕ ಚಿತ್ರ)
3/ 7
ಉಡುಪಿಯ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ ಲಕ್ಷಾಂತರ ಮೌಲ್ಯದ ಗೋಳಿ ಮೀನು ಸಿಕ್ಕಿದೆ. ಗೋಳಿ ಮೀನು ಸಿಕ್ಕಿದ ವಿಷಯ ತಿಳಿಯುತ್ತಲೇ ಮೀನುಗಾರರೆಲ್ಲರೂ ನೋಡಲು ಮುಗಿಬಿದ್ದಿದ್ದರು. (ಸಾಂದರ್ಭಿಕ ಚಿತ್ರ)
4/ 7
22 ಕೆಜಿ ತೂಕದ ಮೀನು ಇದಾಗಿದ್ದು, 2,34,080 ರೂಪಾಯಿಗಳಿಗೆ ಮಾರಾಟವಾಗಿದೆ. ಈ ಗೋಳಿ ಮೀನು ಔಷಧಿ ತಯಾರಿಕೆಯಲ್ಲಿ ಬಳಕೆ ಆಗುತ್ತದೆ.
5/ 7
ಗೋಳಿ ಮೀನಿನ ವೈಜ್ಞಾನಿಕ ಹೆಸರು ಘೋಲ್ ಫಿಶ್. ಇದು ಸಮುದ್ರದಾಳದಲ್ಲಿ ಜೀವಿಸುವ ಜಲಚರವಾಗಿದೆ. ಅರಬ್ಬಿ ಸಮುದ್ರ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸಾಗರಗಳಲ್ಲಿ ಈ ಘೋಲ್ ಫಿಶ್ ಕಂಡು ಬರುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಘೋಲ್ ಫಿಶ್ ವಾಯು ಚೀಲವನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸೋದರಿಂದ ವಿದೇಶದಲ್ಲಿ ಹೆಚ್ಚು ಬೇಡಿಕೆ. ಈ ಮೀನು ಸುಮಾರು ಒಂದು ಮೀಟರ್ ವರೆಗೂ ಬೆಳೆಯುತ್ತದೆ. 30 ಕೆಜಿ ತೂಕದ ಘೋಲ್ ಫಿಶ್ ಗೆ 5 ಲಕ್ಷ ರೂ.ವರೆಗೂ ಬೆಲೆ ಇದೆ. (ಸಾಂದರ್ಭಿಕ ಚಿತ್ರ)
7/ 7
ಕೆಲ ತಿಂಗಳ ಹಿಂದೆ ಶಾನ್ ರಾಜ್ ತೊಟ್ಟಂ ಎಂಬವರ ಬಲರಾಮ ಹೆಸರಿನ ಬೋಟ್ ಮೂಲಕ ಮೀನುಗಾರಿಕೆಗೆ ಹೋದಾಗ 20 ಕೆಜಿ ತೂಕದ ಗೋಳಿ ಮೀನು ಸಿಕ್ಕಿತ್ತು. ಇದು 1.90 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. (ಸಾಂದರ್ಭಿಕ ಚಿತ್ರ)