Male Mahadeshwara Temple: ಮಾದಪ್ಪನಿಗೆ ಹರಿದುಬಂತು ಕೋಟಿಗಟ್ಟಲೇ ಕಾಣಿಕೆ: ನಾಣ್ಯಗಳ ರೂಪದಲ್ಲಿಯೇ ಲಕ್ಷಕ್ಕೂ ಅಧಿಕ ಹಣ
ಈ ತಿಂಗಳ ಮಲೈ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಶುಕ್ರವಾರ ಆರಂಭವಾದ ಎಣಿಕೆ ತಡರಾತ್ರಿವರೆಗೂ ನಡೆದಿತ್ತು. ಹರಕೆ ಹೊತ್ತ ಭಕ್ತರು ಮಹದೇಶ್ವರನ ಹುಂಡಿಗೆ ಧಾರಾಳವಾಗಿ ಕಾಣಿಕೆ ನೀಡಿದ್ದಾರೆ.
ಹುಂಡಿ ಎಣಿಕೆ ಕಾರ್ಯವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು, ಎಣಿಕೆ ನಡೆಯುತ್ತಿದ್ದ ಕೊಠಡಿ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ತಿಂಗಳು ನಾಣ್ಯದ ರೂಪದಲ್ಲಿಯಹೇ ಕೋಟಿಗೂ ಅಧಿಕ ಹಣ ಬಂದಿದೆ.
2/ 5
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಐತಿಹಾಸಿಕ ಪ್ರಸಿದ್ಧ ಮಲೆ ಮಹೇಶ್ವರ ದೇವಾಲಯ ಇದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ದೇವಸ್ಥಾನಗಳಲ್ಲಿ ಇದು ಸಹ ಒಂದಾಗಿದೆ.
3/ 5
ಮಲೈಮಹದೇಶ್ವರ ನ ಹುಂಡಿಯಲ್ಲಿ 1.67 ಕೋಟಿ ರೂ.ಸಂಗ್ರಹವಾಗಿದೆ. ನಾಣ್ಯಗಳ ರೂಪದಲ್ಲಿ 12.33 ಲಕ್ಷ ರೂ ನಗದು ಸಂಗ್ರಹವಾಗಿದೆ. ನಗದು ಜೊತೆಗೆ 55 ಗ್ರಾಂ ಚಿನ್ನ, 2ಕೆಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ.
4/ 5
ಜುಲೈನಲ್ಲಿ ನಡೆದ ಹುಂಡಿಕೆ ಎಣಿಕೆ ವೇಳೆ 2 ಕೋಟಿ, 33 ಲಕ್ಷದ 57 ಸಾವಿರದ 288 ರೂಪಾಯಿ ಹಣ ಸಂಗ್ರಹವಾಗಿತ್ತು. ಪ್ರತಿ ಬಾರಿ ಹುಂಡಿ ಎಣಿಕೆ ಕಾರ್ಯ ನಡೆದಾಗ ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಲಿದೆ.
5/ 5
ಮೈಸೂರಿನಿಂದ ೧೫೦ ಕಿ ಮೀ ಹಾಗು ರಾಜಧಾನಿ ಬೆಂಗಳೂರಿನಿಂದ ೨೧೦ ಕಿ ಮೀ ದೂರವಿದೆ ಮಹದೇಶ್ವರ ಬೆಟ್ಟ. ಶೈವ ಸಮುದಾಯಕ್ಕೆ ಮಹದೇಶ್ವರ ದೇವಸ್ಥಾನ ಮುಖ್ಯವಾದ ಭಕ್ತಿಕೇಂದ್ರವಾಗಿದೆ ಹಾಗೂ ಶಿವನ ಆರಾಧಾನಾ ಕೇಂದ್ರವೂ ಕೂಡ ಆಗಿದೆ.