Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

ಮದುವೆ ದಿನ ವಧು ಯಾವ ರೀತಿ ರೆಡಿಯಾಗಬೇಕು? ಹೇಗೆಲ್ಲಾ ಕಾಣಬೇಕು ಎಂದು ತಿಂಗಳು ಮೊದಲೇ ಪ್ಲಾನ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮದುವೆಗಾಗಿ ವಧುಗಳು ವಿಶೇಷವಾಗಿ ಮೇಕಪ್ ಮಾಡಿಕೊಳ್ಳುತ್ತಾರೆ.

First published:

  • 18

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಕೆಲವೊಮ್ಮೆ ಮೇಕಪ್​ ಮಾಡಿಕೊಂಡ ನಂತರ ಬಳಸಿದ ಕೆಮಿಕಲ್ ಪರಿಣಾಮ ಮುಖದ ಮೇಲೆ ಸಣ್ಣ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಈ ಕಪ್ಪು ಕಲೆಗಳು ಹೋಗಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಹಾಸನ ಜಿಲ್ಲೆಯ ಯುವತಿಯೊಬ್ಬಳ ಬದುಕನ್ನು ಮೇಕಪ್ ಕತ್ತಲಾಗಿಸಿದೆ. ಮದುವೆಗಾಗಿ ಮಾಡಿಸಿಕೊಂಡಿದ್ದ ಮೇಕಪ್​ನಿಂದ ಮುಖ ಸುಟ್ಟ ರೀತಿ ಗಾಯವಾಗಿದೆ. ಮುಖ ಸಂಪೂರ್ಣ ಹಾಳಾಗಿದ್ದು, ಯುವತಿಯ ಮದುವೆ ಮುಂದೂಡಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದ ನಿವಾಸಿಯಾಗಿರುವ ಯುವತಿ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ & ಅಂಡ್ ಸ್ಪಾ‌ನಲ್ಲಿ ಮೇಕಪ್ ಮಾಡಿಸಿಕೊಂಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಬ್ಯೂಟಿಷಿಯನ್ ಗಂಗಾ ನಮ್ಮಲ್ಲಿ ಹೊಸ ಮಾದರಿಯ ಮೇಕಪ್ ಬಂದಿದೆ ಎಂದು ಹೇಳಿದ್ದಾಳೆ. ಯುವತಿ ಸಹ ಹೊಸ ಮಾದರಿಯ ಮೇಕಪ್​ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಬ್ಯೂಟಿಷಿಯನ್ ಸ್ಟೀಮ್ ಮೇಕಪ್ ಮಾಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಯುವತಿಯ ಮುಖದ ಮೇಲಿನ ಚರ್ಮ ಸುಟ್ಟಂತೆ ಗಾಯವಾಗಿದೆ. ಕಣ್ಣುಗಳು ಒಳಕ್ಕೆ ಹೋಗಿದ್ದು, ಮುಖವೆಲ್ಲಾ ಊದಿಕೊಂಡಿದೆ. ಈ ವಿಷಯ ತಿಳಿದ ವರ ಮದುವೆಯಾಗಲು ಹಿಂದೇಟು ಹಾಕಿದ್ದನು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಸದ್ಯ ಪೋಷಕರು ಯುವಕನ ಮನವೊಲಿಸಿದ್ದು, ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಯುವತಿಯ ಮದುವೆ ಫೆಬ್ರವರಿ 27 ಮತ್ತು 28ರಂದು ನಡೆಯಬೇಕಿತ್ತು. ಇದೀಗ ಮದುವೆ ಮುಂದೂಡಿಕೆಯಾಗಿದೆ. ಚಿಕಿತ್ಸೆ ಪಡೆದುಕೊಂಡಿರುವ ಯುವತಿ ಮನೆಗೆ ವಾಪಸ್ ಆಗಿದ್ದಾಳೆ. ಮುಖ ಸರಿಯಾದ ಮೇಲೆ ಮದುವೆ ಮಾಡಲು ಹಿರಿಯರು ತೀರ್ಮಾನಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Hassan: ವಧುವಿನ ಬಾಳಿಗೆ ಕತ್ತಲೆ ತಂದ ಮೇಕಪ್; ಮದುವೆ ಮುಂದೂಡಿಕೆ

    ಅರಸೀಕೆರೆ ಪೊಲೀಸರು ಬ್ಯೂಟಿಷಿಯನ್ ಗಂಗಾಳನ್ನು ಠಾಣೆಗೆ ಕರೆಸಿ ವಿಚಾರಣೆ ಸಹ ನಡೆಸಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES