Makar Sankranti 2020: ಸೂರ್ಯ ಪಥ ಬದಲಿಸೋ ವೇಳೆ ಸಂಕ್ರಾಂತಿ - ಧಾರವಾಡದಲ್ಲಿ ವಿಭಿನ್ನ ಆಚರಣೆ
ನಮ್ಮಲ್ಲಿನ ಬಹುತೇಕ ಹಬ್ಬಗಳಿಗೆ ಒಂದೊಂದು ಪ್ರಾಕೃತಿಕ ಹಿನ್ನೆಲೆಯಿದೆ. ಆಯಾ ಸಮಯದಲ್ಲಿನ ವಿಶೇಷತೆಗೆ ಅನುಗುಣವಾಗಿ ಹಬ್ಬಗಳನ್ನ ಆಚರಿಸಲಾಗುತ್ತೆ. ಇದೀಗ ಬಂದಿರೋ ಮಕರ ಸಂಕ್ರಮಣವೂ ವಿಶೇಷತೆಯನ್ನ ಹೊಂದಿರೋ ಹಬ್ಬ. ಸೂರ್ಯ ತನ್ನ ಪಥವನ್ನ ಬದಲಿಸೋ ಈ ಸಮಯದಲ್ಲಿ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಧಾರವಾಡ ನಗರದ ಸಾಧನ ಕೆರೆಯ ಗಾರ್ಡ್ ನಲ್ಲಿ. ಜಾನಪದ ಸಂಶೋಧನಾ ಕೇಂದ್ರವು ಸಂಕ್ರಾಂತಿ ಸಂಭ್ರಮ ಅನ್ನೋ ವಿಶಿಷ್ಟ ಬಗೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹೊಸ ಸೀರೆ ಧರಿಸಿ ಆಗಮಿಸಿದ ನೀರೆಯರು, ಕೈಯಲ್ಲೊಂದು ಬುತ್ತಿಯ ಬುಟ್ಟಿ ಹಿಡಿದು ಬಂದಿದ್ದರು.
ನಮ್ಮಲ್ಲಿನ ಬಹುತೇಕ ಹಬ್ಬಗಳಿಗೆ ಒಂದೊಂದು ಪ್ರಾಕೃತಿಕ ಹಿನ್ನೆಲೆಯಿದೆ. ಆಯಾ ಸಮಯದಲ್ಲಿನ ವಿಶೇಷತೆಗೆ ಅನುಗುಣವಾಗಿ ಹಬ್ಬಗಳನ್ನ ಆಚರಿಸಲಾಗುತ್ತೆ. ಇದೀಗ ಬಂದಿರೋ ಮಕರ ಸಂಕ್ರಮಣವೂ ವಿಶೇಷತೆಯನ್ನ ಹೊಂದಿರೋ ಹಬ್ಬ. ಸೂರ್ಯ ತನ್ನ ಪಥವನ್ನ ಬದಲಿಸೋ ಈ ಸಮಯದಲ್ಲಿ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ.
2/ 7
ಕೆಲವು ಭಾಗಗಳಲ್ಲಿ ಇದನ್ನು ಪೊಂಗಲ್ ಎಂದು ಕೂಡ ಕರೆಯುತ್ತಾರೆ. ಈ ಬಾರಿ ವಿದ್ಯಾಕಾಶಿ ಧಾರವಾಡದಲ್ಲಿ ಸಂಕ್ರಾತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ.
3/ 7
ಧಾರವಾಡ ನಗರದ ಸಾಧನ ಕೆರೆಯ ಗಾರ್ಡ್ ನಲ್ಲಿ. ಜಾನಪದ ಸಂಶೋಧನಾ ಕೇಂದ್ರವು ಸಂಕ್ರಾಂತಿ ಸಂಭ್ರಮ ಅನ್ನೋ ವಿಶಿಷ್ಟ ಬಗೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹೊಸ ಸೀರೆ ಧರಿಸಿ ಆಗಮಿಸಿದ ನೀರೆಯರು, ಕೈಯಲ್ಲೊಂದು ಬುತ್ತಿಯ ಬುಟ್ಟಿ ಹಿಡಿದು ಬಂದಿದ್ದರು.
4/ 7
ನಸುಕಿನಲ್ಲಿಯೇ ಎದ್ದು ಬಗೆ ಬಗೆಯ ಅಡುಗೆ ತಯಾರಿಸಿ ತಂದಿದ್ದ ಮಹಿಳೆಯರು ಅಲ್ಲಿ ನೆರೆದಿದ್ದ ಎಲ್ಲರ ಬಾಯಲ್ಲಿಯೂ ನೀರೂರುವಂತೆ ಮಾಡಿದರು.
5/ 7
ಮೊದಲಿಗೆ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಬಳಿಕ ಜಾನಪದ ಗೀತೆಗಳೊಂದಿಗೆ ಸಂಭ್ರಮ ಆರಂಭವಾಯಿತು. ನಂತ್ರ ಜಾನಪದ ಗೀತೆಗಳು, ಹಾಸ್ಯ ಚಟಾಕಿ, ಸಂಕ್ರಾಂತಿಯ ವಿಶೇಷತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
6/ 7
ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಕಣ್ಮರೆಯಾಗಿದೆ. ಹೀಗೆ ಪಕ್ಕಾ ಜಾನಪದ ಮೆರಗನ್ನ ಹೊಂದಿರೋ, ಸುಗ್ಗಿಯ ಹಬ್ಬವನ್ನ ಜಾನಪದ ಶೈಲಿಯಲ್ಲಿಯೇ ಆಚರಿಸುವ ಮೂಲಕ ಸಿಟಿ ಲೈಫ್ ಗೆ ಒಗ್ಗಿ ಹಲವಾರು ವರ್ಷಗಳೇ ಕಳೆದರೂ ಅವರೆಲ್ಲಾ ಪಕ್ಕಾ ಹಳ್ಳಿ ಹೆಂಗಸರಂತೆ ವೇಷ ಧರಿಸಿ ಬಂದಿದ್ದೇ ಇದಕ್ಕೆ ನೋಡಿದರೆ ಎಲ್ಲರಲ್ಲಿಯೂ ಹಬ್ಬದ ಸಡಗರ ಕಂಡುಬಂದಿತ್ತು.
7/ 7
ಆಧುನಿಕ ಕಾಲದಲ್ಲಿ ಒತ್ತಡದ ಬದುಕಿನಿಂದಾಗಿ ಜನರು ಹಬ್ಬಗಳಿಂದ ಸಿಗುತ್ತಿದ್ದ ಖುಷಿಯಿಂದ ದೂರವೇ ಆಗಿದ್ದಾರೆ. ಈ ಸಂದರ್ಭದಲ್ಲಿ ಇಂಥ ಆಚರಣೆಗಳು ಬದುಕಿಗೆ ಹೊಸ ಆಯಾಮ ನೀಡೋದಲ್ಲದೇ ಮರೆತು ಹೋದ ಗ್ರಾಮೀಣ ಬದುಕನ್ನು ಮತ್ತೆ ನೆನಪಿಸುವಂತೆ ಮಾಡುತ್ತವೆ.