Love Failure: ತಾಳಿ ಕಟ್ಟುವ ವೇಳೆ ಬಿಟ್ ಹೋದ ಗೆಳತಿ: ಬಾರದ ಲೋಕಕ್ಕೆ ತೆರಳಿದ ಪ್ರಿಯತಮ
ಪ್ರೀತಿ ಮಾಯೆ ಹುಷಾರು ಅಂತ ಹೇಳ್ತಾರೆ. ಆದ್ರೆ ಇಂದು ಪ್ರೀತಿ ಕೇವಲ ಆಕರ್ಷಣೆಯಾಗಿ ಉಳಿದಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ತಾಳಿ ಕಟ್ಟಿಸಿಕೊಳ್ಳುವ ಪ್ರೀತಿಯನ್ನು ಯುವತಿ ತಿರಸ್ಕರಿಸಿದ್ದಕ್ಕೆ ನೊಂದ ಪ್ರಿಯತಮ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.
ಚರಣ್ ಜೊತೆಗೆ ಕೆಲಸ ಮಾಡುವ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವತಿ ಸಹ ಚರಣ್ ಪ್ರೀತಿಯನ್ನು ಒಪ್ಪಿಕೊಂಡಿದ್ದಳು. ಆದ್ರೆ ಕೊನೆ ಕ್ಷಣದಲ್ಲಿ ಯುವತಿ ಉಲ್ಟಾ ಹೊಡೆದಿದ್ದಳು. (ಸಾಂದರ್ಭಿಕ ಚಿತ್ರ)
4/ 8
ಚರಣ್ ಮತ್ತು ಯುವತಿ ಇಬ್ಬರು ಮದುವೆಯಾಗಲು ಧರ್ಮಸ್ಥಳಕ್ಕೆ ತೆರಳಿದ್ದರು. ಆದರೆ ಧರ್ಮಸ್ಥಳಕ್ಕೆ ಹೋಗುತ್ತಿದ್ದಂತೆ ಯುವತಿ ಮದುವೆಯನ್ನು ನಿರಾಕರಿಸಿದ್ದಳು. (ಸಾಂದರ್ಭಿಕ ಚಿತ್ರ)
5/ 8
ಚರಣ್ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ರೂ ಯುವತಿ ಮಾತ್ರ ಮದುವೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದಳು. ಕೊನೆ ಗಳಿಗೆಯಲ್ಲಿ ಮದುವೆ ಮುರಿದಿದ್ದರಿಂದ ಚರಣ್ ಮಾನಸಿಕವಾಗಿ ಕುಗ್ಗಿದ್ದನು ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಇದರಿಂದ ಕುಗ್ಗಿದ್ದ ಚರಣ್ ಧರ್ಮಸ್ಥಳದಿಂದ ನೇರವಾಗಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)
7/ 8
ಮೂರು ವರ್ಷದ ಹಿಂದೆ ಕೂಡ ರೈಲ್ವೆ ಟ್ರಾಕ್ ನಲ್ಲಿ ಚರಣ್ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಂದು ಸ್ನೇಹಿತರು ಚರಣ್ ಪ್ರಾಣ ಉಳಿಸಿದ್ದರು. (ಸಾಂದರ್ಭಿಕ ಚಿತ್ರ)
8/ 8
ಕಳೆದ ವರ್ಷ ಚರಣ್ ಸಹೋದರಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ಚರಣ್ ಸೋದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಸಾಂದರ್ಭಿಕ ಚಿತ್ರ)