ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

ಹಾಸನ (Hassan) ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಭೀಕರ ಅಪಘಾತ (Accident) ಸಂಭವಿಸಿದ್ದು, ಎರಡು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಒಂದೇ ಲಾರಿ (Lorry) ನಾಲ್ಕು ಬೈಕ್ (Bikes)ಗಳಿಗೆ ಡಿಕ್ಕಿ ಹೊಡೆದಿದೆ.

First published:

 • 15

  ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

  ಡಿಕ್ಕಿ ಹೊಡೆದ ಬಳಿಕ ಬೈಕುಗಳನ್ನು ಸುಮಾರು ಎರಡು ಕಿಲೋ ಮೀಟರ್ ದೂರದವರೆಗೆ  ಲಾರಿ ಎಳೆದುಕೊಂಡು ಹೋಗಿದೆ. ಕುಡಿದ ಮತ್ತಿನಲ್ಲಿ ಚಾಲಕ ಲಾರಿ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

  MORE
  GALLERIES

 • 25

  ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

  ಲಾರಿಯ ಟಯರ್ ನಡಿ ಸಿಲುಕಿ ಮೂರು ಕಿಲೋಮೀಟರ್ ದೂರ ಮಗುವಿನ ಮೃತದೇಹ ಹೋಗಿದೆ. ಡಿಕ್ಕಿ ರಭಸಕ್ಕೆ ಮಕ್ಕಳ ದೇಹ ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ.

  MORE
  GALLERIES

 • 35

  ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

  ಹಾಸನದ ಗವೇನಹಳ್ಳಿಯ ಶಿವಾನಂದ್ ಎಂಬವರು ಬೈಕ್ ನಲ್ಲಿ ಪತ್ನಿ ಜ್ಯೋತಿ, ಮಕ್ಕಳಾದ ಪ್ರಣತಿ (3), ಪ್ರಣವ್(3) ಜೊತೆ ಹೊರಟುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

  MORE
  GALLERIES

 • 45

  ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

  ಪ್ರಣತಿ ಮತ್ತು ಪ್ರಣವ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಿವಾನಂದ್ ಮತ್ತು ಜ್ಯೋತಿ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಸಹ ಸಾವನ್ನಪ್ಪಿದ್ದಾರೆ.

  MORE
  GALLERIES

 • 55

  ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮೂವರ ಸಾವು

  ಸದ್ಯ ಶಿವಾನಂದ್ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಶಿವಾನಂದ್ ಅವರ ಸ್ಥಿತಿ ಸಹ ಗಂಭೀರವಾಗಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

  MORE
  GALLERIES