Indian Railways: ಹಂಪಿ ಮಾದರಿಯಲ್ಲಿ ಹೊಸಪೇಟೆ ರೈಲು ನಿಲ್ದಾಣ; ವಿಶ್ವದ ಅತಿ ಉದ್ದದ ರೈಲ್ವೆ Platform ಉದ್ಘಾಟನೆಗೆ ಕ್ಷಣಗಣನೆ
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಮತ್ತು ಹಂಪಿ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಹೊಸಪೇಟೆ ರೈಲು ನಿಲ್ದಾಣದ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ ಸ್ಥಾಪನೆಗೊಂಡಿದೆ.
ಇಂದು ಪ್ರಧಾನಿ ಮೋದಿ ಅವರು ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ ಉದ್ಘಾಟನೆ ಮಾಡಲಿದ್ದಾರೆ. 1,505 ಮೀಟರ್ ಉದ್ದವನ್ನೊಳಗೊಂಡಿರೋ ಪ್ಲಾಟ್ ಫಾರಂ ಇದಾಗಿದ್ದು, ಇದಕ್ಕೂ ಮುನ್ನ ರೈಲ್ವೆ ಪ್ಲಾಟ್ ಫಾರಂ 550 ಮೀಟರ್ ಇತ್ತು.
2/ 7
ಹುಬ್ಬಳ್ಳಿಯಲ್ಲಿ ಒಟ್ಟು 8 ಪ್ಲಾಟ್ ಫಾರಂಗಳ ಸ್ಥಾಪನೆ ಮಾಡಲಾಗಿದೆ. ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ರೈಲ್ವೆ ಪ್ಲಾಟ್ ಫಾರಂ ಗಿನ್ನಿಸ್ ದಾಖಲೆ ನಿರ್ಮಿಸಿದೆ.
3/ 7
ಈ ಮುಂಚೆ ಉತ್ತರ ಪ್ರದೇಶದ ಗೋರಖ್ಪುರ್ ರೈಲ್ವೆ ನಿಲ್ದಾಣ ಅತಿ ಉದ್ದದ ಪ್ಲಾಟ್ ಫಾರಂ ಹೊಂದಿತ್ತು. ಗೋರಖ್ ಪುರ್ ರೈಲ್ವೆ ನಿಲ್ದಾಣ 1366 ಮೀಟರ್ ಪ್ಲಾಟ್ ಫಾರಂ ಹೊಂದಿತ್ತು.
4/ 7
ಇದೀಗ ಈ ದಾಖಲೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ತನ್ನದಾಗಿಸಿಕೊಂಡಿದೆ. ಇಂದು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದು, ನಿನ್ನೆ ನೈಋತ್ಯ ನೈರುತ್ಯ ರೈಲ್ವೆಯ ಜಿಎಂ ಸಂಜೀವ್ ಕಿಶೋರ್ ರೈಲ್ವೆ ಪ್ಲಾಟ್ ಫಾರಂಗೆ ಭೇಟಿ ನೀಡಿ ಪರಿಶೀಲಿಸಿದರು
5/ 7
ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಜೊತೆ ಹೊಸಪೇಟೆ ರೈಲು ನಿಲ್ದಾಣವನ್ನೂ ಪಿಎಂ ಮೋದಿ ಉದ್ಘಾಟಿಸುತ್ತಾರೆ. ಹೊಸಪೇಟೆ ರೈಲು ನಿಲ್ದಾಣ ಹಂಪಿ ಮಾದರಿಯಲ್ಲಿ ನಿರ್ಮಾಣವಾಗಿದೆ.
6/ 7
ಹಂಪಿ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಹೊಸಪೇಟೆ ರೈಲ್ವೆ ನಿಲ್ದಾಣದ ಫೋಟೋಗಳನ್ನು ಪ್ರಧಾನಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
7/ 7
ಹೊಸ ರೈಲು ಸೇರಿ 552 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆ ಉದ್ಘಾಟಿಸಲಿದ್ದಾರೆ ಎಂದು ನ್ಯೂಸ್ 18 ಗೆ ನೈರುತ್ಯ ರೈಲ್ವೆ ಜಿಎಂ ಸಂಜೀವ್ ಕಿಶೋರ್ ತಿಳಿಸಿದ್ದಾರೆ.
First published:
17