ಮದ್ದೂರಮ್ಮ ಮೈದಾನದಲ್ಲಿ ಕಾಲೇಜು ನಿಮಾರ್ಣಕ್ಕೆ ವಿರೋಧ ವ್ಯಕ್ತಪಡಿಸಿ ಕೆಪಿಸಿಸಿ ವಕ್ತಾರ ಶಂಕರಗುಹಾ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯ್ತು.
2/ 9
ಮಕ್ಕಳ ಜೊತೆ ಪ್ರತಿಭಟನೆ ನಡೆಸಿದ ಶಂಕರ್ ಗುಹಾ, ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು. ಶಾಸಕರು ಹಠ ಬಿಡಬೇಕು ಮತ್ತು ಮಕ್ಕಳ ಆಟದ ಮೈದಾನ ಉಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
3/ 9
ಜೆಡಿಎಸ್ನವರೂ ಪ್ರತಿಭಟನೆ ಮಾಡ್ತಿದ್ದಾರೆ. ನನ್ನ ಮೇಲೆ ಶಾಸಕರು ಹಲ್ಲೆ ನಡೆಸಿದ್ದಾರೆ, ವಾಮಚಾರ ಮಾಡ್ತೀನಿ ಎಂದಿದ್ದಾರೆ. ಶಾಸಕರ ವಿರುದ್ಧ ದೂರು ನೀಡುತ್ತೇನೆ ಶಂಕರ್ ಗುಹಾ ಹೇಳಿದ್ದಾರೆ.
4/ 9
1990ರಲ್ಲಿಯೇ ದೇವೇಗೌಡರು ಇದನ್ನು ಆಟದ ಮೈದಾನ ಎಂದು ಗುರುತಿಸಿದ್ದರು. ಅಂದಿನಿಂದಲೂ ಇಲ್ಲಿಯ ಮಕ್ಕಳಿಗೆ ಇದೇ ಆಟದ ಮೈದಾನವಾಗಿದೆ.
5/ 9
ಇಷ್ಟು ವಿರೋಧದ ನಡುವೆಯೂ ಶಾಸಕರು ಕಲ್ಲುಗಳನ್ನು ಹಾಕಿಸಿ ಕಾಲೇಜು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಶಾಸಕರ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದರು.
6/ 9
ಬಿಜೆಪಿಯ ಕೆಲ ಮುಖಂಡರು ಸಹ ನಮ್ಮ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಆದ್ರೆ ಅವರ ಹೆಸರು ನಾನು ಹೇಳಲ್ಲ ಎಂದು ಶಂಕರ್ ಗುಹಾ ಹೇಳಿದ್ದಾರೆ.
7/ 9
ಏನಿದು ವಿವಾದ?
ಶ್ರೀನಗರ ವಾರ್ಡ್ನಲ್ಲಿರುವ ಮದ್ದೂರಮ್ಮ ಮೈದಾನದಲ್ಲಿ ಕಾಲೇಜು ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಈ ಕಾಲೇಜು ನಿರ್ಮಾಣಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ಥಳೀಯರು ವಿರೋಧಿಸಿದ್ದಾರೆ.
8/ 9
10 ಶಾಲೆಗಳಿಗೆ ಇರೋದು ಒಂದೇ ಮೈದಾನ. ಬೇರೆ ಜಾಗ ಹುಡುಕಿ ಕಾಲೇಜು ಕಟ್ಟಲು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
9/ 9
ನಮಗೆ ಇರೋದು ಒಂದೇ ಮೈದಾನ. ಆಟದ ಸಮಯದಲ್ಲಿ ಬೇರೆ ಶಾಲೆಯ ನಮ್ಮ ಗೆಳೆಯರು ಇಲ್ಲಿ ಸಿಗ್ತಾರೆ. ಮನೆ ಹತ್ತಿರವೇ ಮೈದಾನ ಇರೋದರಿಂದ ನಾವು ಇಲ್ಲಿಯೇ ಆಟ ಆಡುತ್ತೇವೆ. ಒಂದು ವೇಳೆ ಕಾಲೇಜು ನಿರ್ಮಿಸಿದ್ರೆ ನಮಗೆ ಆಡಲು ಇಲ್ಲಿ ಅವಕಾಶ ಕೊಡಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.