ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೊಡಗು ಕಂಗಲಾಗಿದೆ ಈಗಾಗಲೇ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ ಭೂ ಕುಸಿತ ಸಂಭವಿಸಿದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿದ್ದಾರೆ. ಮಣ್ಣು ಕುಸಿದಿದ್ದರಿಂದ ಮುಕ್ಕೋಡ್ಲು ತಂತಿಪಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು ಕೂಡಲೇ ಮಣ್ಣು ತೆರವುಗೊಳಿಸುವಂತೆ ಅಪ್ಪಚ್ಚು ರಂಜನ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಮುಕ್ಕೋಡ್ಲು ಸೇತುವೆ ಮುಳುಗಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಅಪ್ಪಚ್ಚು ಪರಿಶೀಲಿಸಿದರು ಭಾರೀ ಮಳೆಯಿಂದಾಗಿ ಈಗಾಗಲೇ ಭಾಗಮಂಡಲ ಸಂಪರ್ಕಿಸುವ ರಸ್ತೆಗಳು ಜಲಾವೃತ ಗೊಂಡಿದೆ ಕೊಡಗಿನ ಮಳೆಯ ದೃಶ್ಯ ಉಕ್ಕಿ ಹರಿಯುತ್ತಿರುವ ನದಿ ಕೊಡಗಿನ ಮಳೆಯ ದೃಶ್ಯ