ಲಾಲ್‌ಬಾಗ್‌ಗೆ ಹರಿದು ಬಂದ ಜನಸಾಗರ

ಸ್ವಾತಂತ್ರೋತ್ಸವದ ಅಂಗವಾಗಿ ಸಸ್ಯಕಾಶಿಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆಬಿತ್ತು. ಕಡೆಯ ದಿನವಾದ ಇಂದು ಸಸ್ಯಕಾಶಿಗೆ ಜನಸಾಗರವೇ ಹರಿದು ಬಂದಿತ್ತು. ಲಾಲ್​ಬಾಗ್ ನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನರು ಕೊನೆಯ ದಿನ ಫಲಪುಷ್ಪ ವೀಕ್ಷಣೆಗೆ ಜಮಾಯಿಸಿದರು. ಅದರಲ್ಲೂ ಸಸ್ಯಕಾಶಿಯ ಬೆಟ್ಟದ ಮೇಲೆ ಜನರು ತುಂಬಿ ತುಳುಕುತ್ತಿದ್ದರು. ಇನ್ನು ಈ ಬಾರಿ ಸೇನಾ ಪಡೆ, ನೌಕಪಡೆ ಹಾಗೂ ವಾಯುಪಡೆಯ ಪ್ರತಿಕೃತಿಗಳನ್ನು ಹೂವಿನಲ್ಲಿ ನಿರ್ಮಿಸಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ತೋಟಗಾರಿಕೆ ಇಲಾಖೆ ಗೌರವ ಸಲ್ಲಿಸಿತ್ತು. ಸಿಯಾಚಿನ್ ಪರ್ವತ ಶ್ರೇಣಿಯ ಮಾದರಿ ಹಲವರ ಮನಸೂರೆಗೊಂಡ್ರೆ, ಕನ್ನಡ ಚಿತ್ರರಂಗಕ್ಕೆ ಗೌರವ ಸಲ್ಲಿಸುವ ಸಲುವಾಗಿ ಗುಲಾಬಿಗಳಲ್ಲಿ ಮೂಡಿ ಬಂದ ಕ್ಯಾಮೆರದ ರೀಲು, ಕ್ಲ್ಯಾಪ್ ಬೋರ್ಡ್ ಮಾದರಿ ನೋಡುಗರ ಮನ ಸೆಳೆಯಿತ್ತು.. ಮಳೆಯ ನಡುವೆಯೂ ಈ ಬಾರಿ ಲಕ್ಷಾಂತರ ಮಂದಿ ಫಲಪುಷ್ಪ ಪ್ರದರ್ಸನವನ್ನು ಕಣ್ಣುತುಂಬಿಕೊಂಡರು. 12 ದಿನಗಳಲ್ಲಿ ಒಟ್ಟು, 4 ವರೆ ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.

  • News18
  • |
First published: