ಗ್ರಾಮಸ್ಥರಿಂದಲೇ ಕೆರೆಯ ಪುನರುಜ್ಜೀವನ ಕಾರ್ಯ

ಶಿವಮೊಗ್ಗ: ಸಾಗರ ತಾಲ್ಲೂಕಿನ ನೀಚಡಿ ಗ್ರಾಮದಲ್ಲಿ ಕೆರೆಯ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ. 2003-2004ರಲ್ಲಿ 8-10 ಯುವಕರಿಂದ ಆರಂಭಗೊಂಡ ನಮ್ಮ ಪಯಣಕ್ಕೆ ಇಂದು ಮತ್ತೆ ನೀಚಡಿ ಕೈಜೋಡಿಸಿದೆ. ಸದಾಸಿದ್ಧವೆನ್ನುವ 40-45 ಜನರ ಯುವ ಪಡೆ ಅಸಾಧ್ಯವನ್ನು ಸಾಧಿಸುವ ಉತ್ಸಾಹದಲ್ಲಿದೆ. ಜೀವನವನ್ನರಸಿ ಬೆಂಗಳೂರು, ಅಮೇರಿಕಾ ಮುಂತಾದೆಡೆ ನೆಲೆಸಿದವರೂ ಈ ಕಾಯಕದಲ್ಲಿ ಕೈಜೋಡಿಸಿದ್ದಾರೆ.ಇದೇ ವೇಗದಲ್ಲಿ ಮುಂದುವರೆದರೆ ನೀಚಡಿ ಅಕ್ಷರಷಃ ನೀರತಡಿಯಾಗಬಲ್ಲದು, ಹುಲಿಗುಡ್ಡ ಸ್ವಾಭಾವಿಕ, ನೈಸರ್ಗಿಕ ಕಾನನವಾಗಿ ಸಂರಕ್ಷಿಸಲ್ಪಟ್ಟು ಜೀವವೈವಿಧ್ಯತೆಯ ತಾಣವಾಗಬಲ್ಲದು.

  • News18
  • |
First published: