Kukke Subrahmanya Tample: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಸೇವಾ ದರದಲ್ಲಿ ಭಾರೀ ಹೆಚ್ಚಳ!
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಮಣ್ಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇನ್ನು ಈ ನಾಗಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಸೇವಾ ದರ ಮತ್ತು ಕ್ರಿಯಾ ಕರ್ತೃರ ಕ್ರಿಯಾ ದಕ್ಷಿಣೆ ಹೆಚ್ಚಳ ಮಾಡಲಾಗಿದೆ.
ಈ ಮೊದಲು 3,200 ರೂ.ಇದ್ದ ಸರ್ಪ ಸಂಸ್ಕಾರ ಸೇವೆಯ ದರವನ್ನು ರೂ. 4,200ಕ್ಕೆ ಹೆಚ್ಚಿಸಲಾಗಿದೆ ಮತ್ತು ಕ್ರಿಯಾ ಕರ್ತೃರ ಕ್ರಿಯಾ ದಕ್ಷಿಣೆಯನ್ನೂ ಹೆಚ್ಚಿಸಲಾಗಿದೆ.
2/ 8
ಈ ಮೂಲಕ ಸರ್ಪ ಸಂಸ್ಕಾರದ ದರದಲ್ಲಿ ಒಂದು ಸಾವಿರ ಹೆಚ್ಚಿಸಲಾಗಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
3/ 8
ನಾಗದೋಷ ನಿವಾರಣೆಗೆ ದೇಶದ ಹಲವಾರು ಮಂದಿ ಕುಕ್ಕೆಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸುತ್ತಾರೆ.
4/ 8
ಹಲವು ಗಣ್ಯರು ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ ಬಳಿಕ ದೇಶಾದ್ಯಂತ ಕುಕ್ಕೆ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಸೇವೆಯ ಮಹತ್ವ ವ್ಯಾಪಕವಾಗಿ ಹರಡಿದೆ.
5/ 8
ಇದೀಗ ದರ ಹೆಚ್ಚಾಗಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದ್ದಾರೆ. ಅದರಲ್ಲೂ 1 ಸಾವಿರ ಬೆಲೆ ಏರಿಕೆ ಮಾಡಿದ್ದು ಭಾರೀ ಹೊರೆಯಾಗಲಿದೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
6/ 8
ಹಿಂದೂಗಳ ಪವಿತ್ರ ಧರ್ಮ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯವು ಕುಮಾರಧಾರ ನದಿಯ ದಂಡೆಯಲ್ಲಿದೆ . ದುಷ್ಟ ರಾಕ್ಷಸರ ದಮನ ಮಾಡಲು ಜನ್ಮವೆತ್ತಿದ ಈಶ್ವರ ಪುತ್ರರಾದ ಸುಬ್ರಹ್ಮಣ್ಯರು ತಾರಕಾಸುರಾದಿಯನ್ನು ಯುದ್ಧದಲ್ಲಿ ಸಂಹರಿಸಿ ಸಹೋದರನಾದ ಗಣೇಶರೊಡನೆ ಕುಮಾರಪರ್ವತಕ್ಕೆ ಬಂದಿರುತ್ತಾರೆ.
7/ 8
ಆಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಧಾರ ನದಿಯ ತಟದಲ್ಲಿ ಸುಬ್ರಹ್ಮಣ್ಯರಿಗೆ ಮದುವೆ ಮಾಡಿಕೊಡುತ್ತಾರೆ.
8/ 8
ಅಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ನಾಗ ವಂಶದ ರಾಜ ವಾಸುಕಿಯ ಪ್ರಾರ್ಥನೆಯ ಮೇರೆಗೆ ದೇವಸೇನಾ ಸಮೇತವಾಗಿ ಸುಬ್ರಹ್ಮಣ್ಯರು ಅಲ್ಲಿಯೇ ನೆಲೆಸುವುದಾಗಿ ವಾಸುಕಿಗೆ ಮಾತು ಕೊಡುತ್ತಾರೆ ಅನ್ನೋ ಪೌರಾಣಿಕ ಹಿನ್ನೆಲೆ ಇದೆ.
First published:
18