ಗಂಗಾವತಿ ನಗರದ ಸಾಯಿನಗರಕ್ಕೆ ಜನಾರ್ದನ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷ ಕಾರ್ಯಕರ್ತರು ಭರ್ಜರಿಯಾಗಿ ಹೂಮಳೆ ಸುರಿಸಿ ಸ್ವಾಗತ ಮಾಡಿದ್ದರು. ಅಲ್ಲದೆ ಸಾಯಿ ನಗರದ ಮರಿಸ್ವಾಮಿ ಹಾಗೂ ರಾಜು ನಾಯ್ಕ ಎಂಬ ಯುವಕರು ಕೆಆರ್ಪಿಪಿ ಪಕ್ಷದ ಚಿಹ್ನೆಯನ್ನು ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಯುವಕ ಅಭಿಮಾನ ಕಂಡ ಜನಾರ್ದನ ರೆಡ್ಡಿ ಅವರು ಅವರಿಗೆ ತಮ್ಮ ಅಭಿನಂದನೆ ತಿಳಿಸಿದ್ದಾರೆ.
ಇನ್ನು, ಪ್ರತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, ಗ್ರಾಮಸ್ಥರ ಬಳಿ ಸಮಸ್ಯೆಯನ್ನು ಆಲಿಸಿ ಶೀಘ್ರವೇ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ. ಕೆಆರ್ಪಿಪಿ ಪಕ್ಷದಿಂದ ಇದುವರೆಗೂ 12 ಅಭ್ಯರ್ಥಿಗಳನ್ನು ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ. ಒಟ್ಟು 30 ಕ್ಷೇತ್ರಗಳಲ್ಲಿ ಕೆಆರ್ಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ರೆಡ್ಡಿ ಮಾಹಿತಿ ನೀಡಿದ್ದು, ಇನ್ನೊಂದು ತಿಂಗಳಿನಲ್ಲಿ ಉಳಿದ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.