ಬಾಗಲಕೋಟೆ: ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗೋದಿಲ್ಲ ಅಂತ ಹೇಳೋದಿಲ್ಲ, ಆದರೆ ಈ ಬಗ್ಗೆ ನಿಖರವಾಗಿ ಯುಗಾದಿ ಭವಿಷ್ಯದಲ್ಲಿ ಹೇಳ್ತೀನಿ. ಆದರೆ ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ ಇದ್ದು, ರಾಜಕೀಯ ಪಕ್ಷಗಳು ಒಡೆಯುತ್ತವೆ. ಪಕ್ಷಾಂತರಗಳು ಇರುತ್ತವೆ, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಚುನಾವಣೆ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಜಮಖಂಡಿಯಲ್ಲಿ ಮಾತನಾಡಿ ರಾಜಕೀಯ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೋಡಿ ಶ್ರೀಗಳು, ಈ ಬಗ್ಗೆ ನಿಖರ ಮಾಹಿತಿ ನೀಡಲು ಯುಗಾದಿ ಆಗಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಬಳಿಕ ಭವಿಷ್ಯದ ನುಡಿಗಳನ್ನು ಹೇಳುತ್ತೇವೆ. ಸಂಕ್ರಾಂತಿ ಫಲ ಇರುವುದು ರಾಜರು, ರೈತರು, ವ್ಯಾಪಾರಸ್ಥರಿಗೆ ಬರುತ್ತದೆ. ಇದರ ಪ್ರಕಾರ ಮುಂದಿನ ಎರಡ್ಮೂರು ಇಸವಿ ಬಹಳ ಕಷ್ಟ ಇದೆ. ಎಷ್ಟು ಸುಖ ಇದೆಯೋ ಅಷ್ಟೇ ಕಷ್ಟ ಇದೆ ಎಂದರು.
ಕೊರೊನಾದಿಂದ ಅಂತಹ ಯಾವುದೇ ಅನಾಹುತ ಆಗೋದಿಲ್ಲ. ಪ್ರಕೃತಿ ವಿಕೋಪಗಳು ನಡೆಯುತ್ತದೆ. ಆದರೆ ಈ ಬಗ್ಗೆ ಯುಗಾದಿ ಭವಿಷ್ಯದಲ್ಲಿ ನಿಖರ ಮಾಹಿತಿ ನೀಡುತ್ತೇವೆ. ಇದೇ ವೇಳೆ ಜಮಖಂಡಿ ಭೇಟಿ ವಿಚಾರವಾಗಿ ಮಾತನಾಡಿದ ಶ್ರೀಗಳು, ಜಮಖಂಡಿ ಮಠಕ್ಕೆ ನಾನು ಹಳೆಯ ವ್ಯಕ್ತಿ. ಈ ಊರು ಬಹಳ ಬೆಳೆದಿದೆ. ಜಮಖಂಡಿ ಮೈಸೂರು ರೀತಿ ಆಗಿದೆ. ಹೆಚ್ಚಿನ ಅಭಿವೃದ್ಧಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.