H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

ಹಾಸನ: ರಾಜ್ಯದಲ್ಲಿ ಜನರು ಕೊರೊನಾ ಸಾಂಕ್ರಾಮಿಕ ಕಾಯಿಲೆಯಿಂದ ಅನುಭವಿಸಿದ ಸಂಕಷ್ಟಗಳ ಸರಮಾಲೆಯಿಂದ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಾಗಲೇ ಮತ್ತೊಂದು ಕಾಯಿಲೆ ಜನರಲ್ಲಿ ಆತಂಕ ಮೂಡಿಸಿದೆ. ಈ ಭಯಾನಕ ಕಾಯಿಲೆ ತಗುಲಿ ಹಾಸನದಲ್ಲೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಜನರು ಸಾವನ್ನಪ್ಪಿದ ಭಯಾನಕ ಸನ್ನಿವೇಶವನ್ನೇ ಈ ಸಾವು ಕೂಡ ನೆನಪಿಸಿದೆ.

First published:

 • 18

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಹೌದು.. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಚ್‌3ಎನ್‌2 (H3N2) ಕಾಯಿಲೆಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 78 ವರ್ಷ H3N2ಗೆ ಬಲಿಯಾಗಿದ್ದಾರೆ.

  MORE
  GALLERIES

 • 28

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮೂಲದ ವೃದ್ಧನಿಗೆ ಮಾರಣಾಂತಿಕ ಎಚ್‌3ಎನ್‌2 ವೈರಸ್ ದೃಢಪಟ್ಟಿದ್ದು, ಅವರು ಮಾರ್ಚ್‌ ಒಂದರಂದು ಆಲೂರಿನಲ್ಲಿ ಮೃತಪಟ್ಟಿದ್ದರು.

  MORE
  GALLERIES

 • 38

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಜ್ಚರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ 78 ವರ್ಷದ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅವರ ಮರಣೋತ್ತರ ಪರೀಕ್ಷೆಯಲ್ಲಿ ಎಚ್‌3ಎನ್‌2 ವೈರಸ್ ಇರೋದು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

  MORE
  GALLERIES

 • 48

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಚ್‌3ಎನ್‌2 ವೈರಸ್ ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿದೆ.

  MORE
  GALLERIES

 • 58

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಹಾಸನದಲ್ಲಿ ಆರು ಜನರಿಗೆ ಹೆಚ್3ಎನ್2 ವೈರಸ್ ತಗುಲಿರುವುರು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕೊಮಾರ್ಬಿಡಿಟಿ ಮತ್ತು 60 ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.

  MORE
  GALLERIES

 • 68

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಇನ್ನು ಹಾಸನದಲ್ಲಿ ವಯೋವೃದ್ಧ ಸಾವನ್ನಪ್ಪಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಕ್ತಿ ಮೃತಪಟ್ಟ ಸುತ್ತಮುತ್ತಲ ಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಅನಾರೋಗ್ಯ ಪೀಡಿತರ ಮೇಲೆ ವಿಶೇಷ ಗಮನ ವಹಿಸಲಾಗಿದೆ.

  MORE
  GALLERIES

 • 78

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಆಲೂರಿನಲ್ಲಿ ಅನಾರೋಗ್ಯ ಪೀಡಿತರನ್ನೆಲ್ಲ ತಪಾಸಣೆ ನಡೆಸಿ ಗಂಟಲು ದ್ರವವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಡಿಎಚ್‌ಒ ಡಾ.ಶಿವಸ್ವಾಮಿ ಹೇಳಿದ್ದಾರೆ.

  MORE
  GALLERIES

 • 88

  H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಹಾಸನದಲ್ಲಿ ವಯೋವೃದ್ಧನ ಸಾವಿನಿಂದ ಹೆಚ್ಚಿದ ಆತಂಕ!

  ಎಚ್3ಎನ್2 ವೈರಸ್​​ನಿಂದ ಹರಡಿರುವ ಸೋಂಕು ಕನಿಷ್ಠ 5ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಈ ಸೋಂಕು ಬೇಗನೇ ಹರಡುತ್ತದೆ. 15 ವರ್ಷದಿಂದ 65 ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

  MORE
  GALLERIES