ಜನರು ಡಿಸ್ಕೌಂಟ್ ಅಂದರೆ ಮುಗಿ ಬೀಳ್ತಾರೆ ಅನ್ನೋದನ್ನೇ ಎನ್ಕ್ಯಾಷ್ ಮಾಡಿಕೊಂಡ ಟ್ರಾಫಿಕ್ ಪೊಲೀಸರು, 50 ಪರ್ಸೆಂಟ್ ಡಿಸ್ಕೌಂಟ್ ಕೊಟ್ಟಿದ್ದಾರೆ. ಇದರೊಂದಿಗೆ ಇಂದು ಒಂದೇ ದಿನ ಬರೋಬ್ಬರಿ 2.1 ಲಕ್ಷ ಕೇಸ್ಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ. ಹೌದು, ಡಿಸ್ಕೌಂಟ್ ಆಫರ್ ಕೊಟ್ಟ ಮೊದಲ ದಿನವೇ 2,01,828 ಲಕ್ಷ ಪ್ರಕರಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
ಸಿಲಿಕಾನ್ ಸಿಟಿ ವಾಹನ ಸವಾರರು ಇಂದು ಸಂಜೆ 5 ಗಂಟೆ ವೇಳೆಗೆ ಐದು ಕೋಟಿ ರೂಪಾಯಿ ಅಧಿಕ ದಂಡ ವಸೂಲಿ ಮಾಡಿದ್ದರು. ಆ್ಯಪ್ ಹಾಗೂ ಬೇರೆ ಬೇರೆ ರೀತಿಯಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ. ಪಿಡಿಎಯಲ್ಲಿ 61,174 ಕೇಸ್, ಪೇಟಿಎಂ ಆ್ಯಪ್ ನಿಂದ 75,185 ಕೇಸ್, ಟಿಎಂಸಿ ಕೇಂದ್ರದಲ್ಲಿ 337 ಕೇಸ್, ಬೆಂಗಳೂರು ಓನ್ ನಲ್ಲಿ 6,161 ಕೇಸ್ ಸೇರಿದಂತೆ ವಿವಿಧ ರೀತಿಯಲ್ಲಿ 2 ಲಕ್ಷ ಕ್ಕೂ ಅಧಿಕ ಕೇಸ್ಗಳಿಂದ ಹಣ ವಸೂಲಿ ಆಗಿದೆ. (ಸಾಂದರ್ಭಿಕ ಚಿತ್ರ)