ಇದೇ ವೇಳೆ ಕೆಲವು ಸವಾರರು ಕಾಲಾವಕಾಶ ಸಾಕಾಗ್ತಿಲ್ಲ. ರಿಯಾಯಿತಿ ದಂಡ ಪಾವತಿಗೆ ಇನ್ನೂ ಒಂದು ವಾರ ಕಾಲಾವಕಾಶ ವಿಸ್ತರಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಕೆಲವರ ಬಳಿ ಹಣ ಇರುತ್ತೆ, ಇನ್ನೂ ಕೆಲವರ ಬಳಿ ಹಣ ಇರಲ್ಲ. ಇನ್ನು ಸರ್ವರ್ ಇವತ್ತು ಜಾಮ್ ಆಗಿದ್ದು, ದಂಡ ಕಟ್ಟಲು ಸಾಧ್ಯವಾಗುತ್ತಿಲ್ಲ ಇನ್ನು ಸ್ವಲ್ಪ ಸಮಯ ಕೊಡಬೇಕು ಅಂತ ಒತ್ತಾಯ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
ಯಾವ ದಿನ ಎಷ್ಟು ದಂಡ ಸಂಗ್ರಹ ಆಯ್ತು ಅನ್ನೋದನ್ನು ನೋಡುವುದಾದರೆ, ಫೆಬ್ರವರಿ 03 ರಂದು 2.24 ಲಕ್ಷ ಕೇಸ್ನಿಂದ 7 ಕೋಟಿ ಸಂಗ್ರಹ ಆಗಿತ್ತು. ಇನ್ನುಳಿದಂತೆ ಫೆ.04 ರಂದು 3 ಲಕ್ಷ ಕೇಸ್ ₹9 ಕೋಟಿ ದಂಡ, ಫೆ.05 ರಂದು 2.87 ಲಕ್ಷ ಕೇಸ್ ₹7.49 ಕೋಟಿ ದಂಡ, ಫೆ.06ಕ್ಕೆ 3.34 ಲಕ್ಷ ಕೇಸ್, ₹9.57 ಕೋಟಿ ದಂಡ, ಫೆ.07 ರಂದು 3.45 ಲಕ್ಷ ಕೇಸ್ ₹9.70 ಕೋಟಿ ದಂಡ, ಫೆ.08 ರಂದು 3.87 ಲಕ್ಷ ಕೇಸ್ ₹10 ಕೋಟಿ ದಂಡ, ಫೆ.09ರಂದು 5.51 ಲಕ್ಷ ಕೇಸ್ ₹14.64 ಕೋಟಿ ದಂಡ, ಫೆ.10ರಂದು 6.70 ಲಕ್ಷ ಕೇಸ್ನಿಂದ ₹17.61 ಕೋಟಿ ದಂಡ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)