Karnataka-Goa: ಗೋವಾಗೆ ಹೋಗೋ ಕರ್ನಾಟಕದ ಪ್ರವಾಸಿಗರು 10 ಸಾವಿರಕ್ಕೂ ಹೆಚ್ಚು ದಂಡ ತೆರಬೇಕು! ಏನಿದು ಹೊಸಾ ರಗಳೆ?
ರಜಾದಿನ(Holidays)ಗಳು ಬಂದ್ರೆ ಯುವ ಪೀಳಿಗೆ ನೆರೆಯ ಗೋವಾ(Goa)ಗೆ ತೆರಳುತ್ತಾರೆ. ಆದ್ರೆ ಒಂದು ರಾಜ್ಯದ ವಾಹನ ಮತ್ತೊಂದು ರಾಜ್ಯ ಪ್ರವೇಶಿಸಬೇಕಾದ್ರೆ ನಿಗಿದಿತವಾದ ಒಂದು ಮೊತ್ತವನ್ನು ಪಾವತಿಸಬೇಕು. ಆದ್ರೆ ಕಳೆದ ವಾರ ರಜಾದಿನ ಗೋವಾಗೆ ತೆರಳುತ್ತಿದ್ದ ಕರ್ನಾಟಕದ ಪ್ರವಾಸಿಗರು (Karnataka Tourist) ವಿಶೇಷ ಪರವಾನಗಿ ಪಡೆಯಲು ಪ್ರತಿ ವಾಹನಕ್ಕೆ 10,262 ರೂ. ದಂಡ ಪಾವತಿಸಬೇಕಾಗಿತ್ತು.
ಹೌದು, ಕರ್ನಾಟಕದ ಪ್ರವಾಸಿಗರು ಕಳೆದ ವಾರ ಗಡಿ ದಾಟೋದಕ್ಕೆ 10,262 ರೂ. ಪಾವತಿಸುವಂತಾಗಿತ್ತು. ಕೆಲ ಪ್ರವಾಸಿಗರು ವಾಪಸ್ ಆಗಿದ್ದಾರೆ. ಯಾಕೆ ಇಷ್ಟು ದೊಡ್ಡ ಮೊತ್ತದ ದಂಡ ಎಂಬುದರ ಮಾಹಿತಿ ಇಲ್ಲಿದೆ.
2/ 8
ಕಳೆದ ವಾರ ಗುರುವಾರದಿಂದ ನಾಲ್ಕು ದಿನ ರಜೆ ಇತ್ತು. ಕರ್ನಾಟಕದ ಗಡಿ ಜಿಲ್ಲೆಗಳ ಜನರು ರಜಾದಿನ ಕಳೆಯಲು ಗೋವಾದತ್ತ ಹೊರಟಿದ್ದರು. ಆದ್ರೆ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ಶಾಕ್ ಎದುರಾಗಿತ್ತು.
3/ 8
ಗುರುವಾರದಿಂದ ಶನಿವಾರದವರೆಗೆ ಗೋವಾದ ಮೊಲ್ಲೆಮ್ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕದ 40 ಟ್ಯಾಕ್ಸಿಗಳನ್ನು ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ ರವಿ ಮಾಹಿತಿ ನೀಡಿದ್ದಾರೆ.
4/ 8
ಸಾಮಾನ್ಯವಾಗಿ ಗೋವಾ ಪ್ರವೇಶಿಸಲು ವಿಶೇಷ ಪರವಾನಗಿ ಪಡೆಯಬೇಕು. ಇದಕ್ಕೆ 100 ರೂ.ಗಳಿಂದ 200 ರೂ. ವೆಚ್ಚವಾಗುತ್ತದೆ. ಈ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ RTO ಮತ್ತು ರಾಜ್ಯದ ಇತರೆ ಭಾಗಗಳಲ್ಲಿರುವ RTO ಕಚೇರಿಯಲ್ಲಿ ಪಾವತಿಸಬೇಕು. (ಸಾಂಧರ್ಭಿಕ ಚಿತ್ರ)
5/ 8
ಆದ್ರೆ ಗುರುವಾರದಿಂದ ನಾಲ್ಕು ದಿನ ರಜೆ ಹಿನ್ನೆಲೆ RTO ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆನ್ ಲೈನ್ ನಲ್ಲಿಯೂ ವಿಶೇಷ ಪರವಾನಿಗೆ ಪಡೆಯುವ ವ್ಯವಸ್ಥೆಯೂ ಇಲ್ಲ. (ಸಾಂಧರ್ಭಿಕ ಚಿತ್ರ)
6/ 8
ರಜೆ ಇರೋದರಿಂದ ಟ್ಯಾಕ್ಸಿ ಚಾಲಕರು ವಿಶೇಷ ಪರವಾನಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಮೊದಲು ಚೆಕ್ ಪೋಸ್ಟ್ ಗಳಲ್ಲಿ ಪರವಾನಿಗೆ ಪಡೆಯುವ ವ್ಯವಸ್ಥೆ ಇತ್ತು. ಆದ್ರೆ ಏಪ್ರಿಲ್ 1ರಿಂದ ಈ ಸೇವೆ ಸ್ಥಗಿತಗೊಳಿಸಲಾಗಿದೆ. (ಸಾಂಧರ್ಭಿಕ ಚಿತ್ರ)
7/ 8
ನೆರೆಯ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಆನ್ ಲೈನ್ ನಲ್ಲಿಯೇ ಪರವನಾಗಿ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ಬಂದಿಲ್ಲ. (ಸಾಂಧರ್ಭಿಕ ಚಿತ್ರ)
8/ 8
ಈ ಕುರಿತು ಮಾತನಾಡಿರುವ ಸಾರಿಗೆ ಆಯುಕ್ತ ಶಿವಕುಮಾರ್ ಎನ್, ಆನ್ ಲೈನ್ ನಲ್ಲಿ ವಿಶೇಷ ಪರವಾನಿಗೆ ನೀಡಲು ಆರಂಭಿಸಲಾಗಿದೆ. ಶೀಘ್ರದಲ್ಲಿಯೇ ಚೆಕ್ ಪೋಸ್ಟ್ ಗಳಲ್ಲಿಯೂ ವಿಶೇಷ ಪರವಾನಿಗೆ ವಿತರಿಸುವ ವ್ಯವಸ್ಥೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. (ಸಾಂಧರ್ಭಿಕ ಚಿತ್ರ)