Karnataka SSLC Exam: ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರು, ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಾಲೆಗಳು..! ರಾಜ್ಯದೆಲ್ಲೆಡೆ ಚಿತ್ರಣ ಹೇಗಿದೆ..ಇಲ್ನೋಡಿ
ಕೊರೋನಾ 3ನೇ ಅಲೆ ಆತಂಕದ ನಡುವೆಯೇ ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. 3 ವಿಷಯಗಳಿಗೆ ಇಂದು ಒಂದು ಪರೀಕ್ಷೆ ನಡೆದರೆ, ಮತ್ತೆ ಮೂರು ವಿಷಯಗಳಿಗೆ ಜು.22ರಂದು ಮತ್ತೊಂದು ಪರೀಕ್ಷೆ ನಡೆಸಲಾಗುತ್ತದೆ. ಸ್ಪರ್ಧಾತ್ಮ ಕ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳಿದ್ದು, ಓಎಂಆರ್ ಶೀಟ್ ನೀಡಲಾಗುತ್ತದೆ. ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆಯ ಚಿತ್ರಣ ಹೇಗಿತ್ತು? ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೇಗೆ ತೆರಳಿದರು? ಇತ್ಯಾದಿ ಬಗ್ಗೆ ಇಲ್ಲಿದೆ ಮಾಹಿತಿ.
ಕೊರೋನಾ 3ನೇ ಅಲೆ ಆತಂಕದ ನಡುವೆಯೇ ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. 3 ವಿಷಯಗಳಿಗೆ ಇಂದು ಒಂದು ಪರೀಕ್ಷೆ ನಡೆದರೆ, ಮತ್ತೆ ಮೂರು ವಿಷಯಗಳಿಗೆ ಜು.22ರಂದು ಮತ್ತೊಂದು ಪರೀಕ್ಷೆ ನಡೆಸಲಾಗುತ್ತದೆ.
2/ 11
ಮಧುಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ಶಾಲೆಯ ಹೆಬ್ಬಾಗಿಲಿನಲ್ಲಿ ಸುಸ್ವಾಗತದ ಬೋರ್ಡ್ ಹಾಕಿದ್ದು ಕಂಡುಬಂತು.
3/ 11
ಗೋವಾದಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು.
4/ 11
ಚಿಕ್ಕೋಡಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಒಪಿ ಪ್ರಕಾರ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ತೆರಳಿದರು.
5/ 11
ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ, ನಂಜನಗೂಡಿನಲ್ಲಿ ಪರೀಕ್ಷಾ ಹಬ್ಬ ಆಚರಿಸಲಾಯಿತು.
6/ 11
ಕೇರಳ ವಿದ್ಯಾರ್ಥಿಗಳಿಗೆ ತಳಪಾಡಿ ಚೆಕ್ಪೋಸ್ಟ್ ನಲ್ಲಿ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
7/ 11
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು.
8/ 11
SSLC ಪರೀಕ್ಷೆ ಬರೆಯಲು ತೆರಳಿದ ಮಕ್ಕಳು
9/ 11
ಬಸ್ಸಿಗಾಗಿ ಕಾಯುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು
10/ 11
ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ ದೃಶ್ಯ
11/ 11
ಪರೀಕ್ಷೆಗೂ ಮುನ್ನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸುರೇಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ದೃಶ್ಯ