2nd PUC Exam: ಇವತ್ತು ಪರೀಕ್ಷೆ ಬರೆಯಲಿಲ್ಲ 8,125 ವಿದ್ಯಾರ್ಥಿಗಳು; ಗೈರಿಗೆ ಅಸಲಿ ಕಾರಣ ಏನು ಗೊತ್ತಾ?
ಬೆಂಗಳೂರು, ಏ.23: ಎರಡನೇ ದಿನದ ದ್ವಿತೀಯ ಪಿಯುಸಿ (2nd PUC Exam) ಪರೀಕ್ಷೆಯಲ್ಲಿ ಗೈರು ಹಾಜರಿ ಮುಂದುವರಿದೆ. ಇಂದು ಸಹ ಬರೋಬ್ಬರಿ 8,125 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಇಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಯಿತು, ಇಂದು ಅನೇಕರು ಪರೀಕ್ಷೆಗೆ ಗೈರಾಗಿದ್ದಾರೆ.
ಇಂದು ನಡೆದ ಗಣಿತ ವಿಷಯಕ್ಕೆ 5,223 ಮತ್ತು ಶಿಕ್ಷಣ ಶಾಸ್ತ್ರಕ್ಕೆ 2,902 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಎರಡನೇ ದಿನವೂ ಬರೋಬ್ಬರಿ 8 ಸಾವಿರಕ್ಕೂ ಅಧಿಕ ಸ್ಟೂಡೆಂಟ್ಸ್ ಗೈರಾಗಿದ್ದು ಕಾರಣ ಮಾತ್ರ ತಿಳಿದು ಬಂದಿಲ್ಲ
2/ 8
ರಾಜ್ಯಾದ್ಯಂತ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ನಿನ್ನೆ 11,379 ವಿದ್ಯಾರ್ಥಿಗಳು ನಾನಾ ಕಾರಣಗಳಿಂದಾಗಿ ಪರೀಕ್ಷೆಗೆ ಗೈರುಹಾಜರಾಗಿದ್ರು. ಇಂದು 8, 125 ವಿದ್ಯಾರ್ಥಿಗಳು ಗೈರಾಗಿದ್ದಾರೆ
3/ 8
ಮೊದಲ ದಿನ ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಿತು. ಮಾಹಿತಿ ನೀಡಿದ ಪಿಯುಸಿ ಮಂಡಳಿ, ತರ್ಕಶಾಸ್ತ್ರ ಪರೀಕ್ಷೆಗೆ 620 ವಿದ್ಯಾರ್ಥಿಗಳು ನೋಂದಾಯಿಸಿದ್ದು, 552 ಹಾಜರಾಗಿದ್ದರೆ 68 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
4/ 8
ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಗೆ 2,38,764 ವಿದ್ಯಾರ್ಥಿಗಳು ನೋಂದಾಯಿಸಿದರೆ 2,27,453 ಹಾಜರಾಗಿದ್ದು 11,311 ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದೆ.
5/ 8
ಯಾವುದೇ ವಿದ್ಯಾರ್ಥಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಡಿಬಾರ್ ಆಗಿಲ್ಲ. ಯಾವುದೇ ವಿದ್ಯಾರ್ಥಿಗೂ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
6/ 8
ಪಿಯು ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಾಮಚಂದ್ರನ್, ವಿದ್ಯಾರ್ಥಿಗಳು ಗೈರಾಗಲು ಹಲವು ಕಾರಣಗಳಿರಬಹುದು, ಕೋವಿಡ್ ಕಾರಣದಿಂದ ಈ ಬಾರಿಯೂ ಪಾಸ್ ಆಗಬಹುದು ಅಂತ ರಿಜಿಸ್ಟರ್ ಮಾಡಿರಬಹುದು ಎಂದ್ರು
7/ 8
ಗೈರಾದವರು ಮತ್ತೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶವಿದೆ, ಇಲ್ಲಿಯವರೆಗೆ ಗೈರಾದವರ ಬಗ್ಗೆ ಸಮೀಕ್ಷೆ ನಡೆಸಿಲ್ಲ, ಪ್ರತಿ ವರ್ಷವೂ ಕೂಡ ಹಾಜರಾತಿಯಲ್ಲಿ ವ್ಯತ್ಯಾಸ ಇರುತ್ತೆ, ಈ ವರುಷ ಸ್ವಲ್ಪ ಜಾಸ್ತಿಯೇ ಗೈರಾಗಿದ್ದಾರೆ ಎಂದು ನಿರ್ದೇಶಕ ರಾಮಚಂದ್ರನ್ ಹೇಳಿದ್ದಾರೆ.
8/ 8
ಇಲ್ಲಿಯವರೆಗೆ ಗೈರಾದವರು ತಮ್ಮ ವೈಯಕ್ತಿಕ ಇಚ್ಛೆಯಂತೆ ಪರೀಕ್ಷೆ ಬರೆದಿಲ್ಲ, ಪರೀಕ್ಷೆಗೆ ಗೈರಾದವರ ಬಗ್ಗೆ ಸರ್ವೇ ಮಾಡುವುದರ ಕುರಿತು ಚಿಂತನೆ ನಡೆಸಿದ್ದಾರೆ. ಮುಂದಿನ ವರ್ಷದಿಂದ ಗೈರು ಆಗಿವವರ ಸಂಖ್ಯೆ ಕಡಿಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.