Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

ರಾಜ್ಯದ ಹಲವೆಡೆ ಮಳೆ ಮುಂದುವರೆದಿದ್ದು, ಭಾನುವಾರದ ವರೆಗೂ ಗುಡುಗು ಸಹಿತ ಆಲಿಕಲ್ಲು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

First published:

  • 17

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ರಾಯಚೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದೆ. ರಾಯಚೂರು, ಯಾದಗಿರಿ, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಅಕಾಲಿಕ ಮಳೆ ಹಲವು ಕಡೆ ಅವಾಂತರ ತಂದಿದೆ.

    MORE
    GALLERIES

  • 27

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ರಾಯಚೂರಿನಲ್ಲಿ‌ ವರುಣ ದೇವ ಆರ್ಭಟಿಸಿದ್ದು, ಗುಡುಗು ಸಿಡಿಲಿನ ಅಬ್ಬರದಿಂದ ಮಳೆ ಸುರಿದಿದೆ. ಸುಮಾರು ಒಂದು ಗಂಟೆ ಸುರಿದ ಮಳೆಗೆ ನಗರದ ರಸ್ತೆ ತುಂಬ ನೀರು ತುಂಬಿ ಹರಿದಿತ್ತು. ಪರಿಣಾಮ ಕೆಲ ಸಮಯ ಸಂಚಾರ ಅಸ್ತವ್ಯಸ್ತ ಆಗಿತ್ತು. ಅಲ್ಲದೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಪರದಾಡುತ್ತಿದ್ದರು.

    MORE
    GALLERIES

  • 37

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ರಾಯಚೂರಿನಲ್ಲಿ ಇಂದು ಸುರಿದ ಮಳೆಗೆ ಎಪಿಎಂಸಿಯಲ್ಲಿ ಮಾರುಕಟ್ಟೆಗೆ ತಂದಿದ್ದ ಭತ್ತವೆಲ್ಲ ಮಳೆ ನೀರು ಪಾಲಾಗಿದೆ. ಏಕಾಏಕಿ ಸುರಿದ ಮಳೆಯಿಂದ ರೈತರು ಸಂಗ್ರಹಿಸಿದ್ದ ಭತ್ತ ನೀರಿನಲ್ಲಿ ತೊಯ್ದು ಹೋಗಿತ್ತು. ಬೇರೆ ಬೇರೆ ಗ್ರಾಮಗಳಿಂದ ಮಾರಾಟಕ್ಕೆ ತಂದಿದ್ದ ರೈತರು ಭಾರೀ ನಷ್ಟವನ್ನು ಎದುರುಸಿದ್ದಾರೆ.

    MORE
    GALLERIES

  • 47

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ಮತ್ತೊಂದೆಡೆ ಏಮ್ಸ್ ಹೋರಾಟಕ್ಕೂ ಮಳೆಯ ಬಿಸಿ ತಟ್ಟಿದೆ. ಧರಣಿ ಸತ್ಯಾಗ್ರಹಕ್ಕೆಂದು ಹಾಕಿದ ಟೆಂಟ್ ನೆಲ ಸಮವಾಗಿತ್ತು. ಕೆಲವೆಡೆ ನಗರದಲ್ಲಿ ಮರಗಳು ಧರೆಗುರುಳಿದ್ದು, ಒಂದೂವರೆ ಗಂಟೆಗಳ‌ ಕಾಲ ವಿದ್ಯುತ್ ಸ್ಥಗಿತವಾಗಿತ್ತು.

    MORE
    GALLERIES

  • 57

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ಇತ್ತ ಯಾದಗಿರಿಯ ಶಹಾಪುರ ತಾಲೂಕಿನ ಸುರಿದ ಮಹಾಮಳೆಗೆ ದೋರನಹಳ್ಳಿ ಗ್ರಾಮ ಜಲಾವೃತವಾಗಿತ್ತು. ಮಳೆ ಆರ್ಭಟಕ್ಕೆ ದೋರನಹಳ್ಳಿಯ ಶಾಂತಿ‌ನಗರ ಸೇರಿದಂತೆ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಗ್ರಾಮದ ಹಲವು ಮನೆಗಳಿಗೆ ನೀರು ತುಂಬಿತ್ತು. ಮಳೆ ನೀರಿನಲ್ಲಿ ಕೊಚ್ಚಿ ಬೈಕ್, ಕಾರು, ದಿನ ಬಳಕೆ ವಸ್ತುಗಳು ಕೊಚ್ಚಿ ಹೋಗಿದೆ.

    MORE
    GALLERIES

  • 67

    Karnataka Rains: ಅಕಾಲಿಕ ಮಳೆ ತಂದ ಅವಾಂತರ; ಮಾರಾಟಕ್ಕೆ ತಂದ ಭತ್ತವೆಲ್ಲ ಮಳೆ ನೀರು ಪಾಲು! ಪ್ರವಾಹದಂತೆ ನುಗ್ಗಿದ ನೀರು

    ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದ ಪರಿಣಾಮ ಹಲವು ವಾಹನಗಳಿಗೆ ಹಾನಿಗೀಡಾಗಿದೆ. ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮದ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು ಧರೆಗುಳಿದಿತ್ತು. ತಕ್ಷಣ ಜಿಲ್ಲಾಡಳಿತ ಗ್ರಾಮಕ್ಕೆ ಭೇಟಿ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

    MORE
    GALLERIES

  • 77