ರಾಜ್ಯದ ಹಲವೆಡೆ ಇಂದೂ ಭಾರೀ ಮಳೆ ಮುಂದುವರಿದಿದೆ. ಉತ್ತರ ಕರ್ನಾಟಕದ ಅನೇಕ ಕಡೆ ಮಳೆಯ ಆರ್ಭಟ ಹೆಚ್ಚಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ ಮೊದಲಾದ ದಕ್ಷಿಣ ಭಾಗದಲ್ಲೂ ಭರ್ಜರಿ ಮಳೆಯಾಗಿದೆ. ಹಾವೇರಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ಐವರು ರೈತರು ಸಾವನ್ನಪ್ಪಿದ್ಧಾರೆ.
News18 Kannada | October 20, 2020, 7:54 PM IST
1/ 11
ರಾಜ್ಯದ ಹಲವೆಡೆ ಇಂದೂ ಭಾರೀ ಮಳೆ ಮುಂದುವರಿದಿದೆ. ಉತ್ತರ ಕರ್ನಾಟಕದ ಅನೇಕ ಕಡೆ ಮಳೆಯ ಆರ್ಭಟ ಹೆಚ್ಚಿದೆ.
2/ 11
ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ ಮೊದಲಾದ ದಕ್ಷಿಣ ಭಾಗದಲ್ಲೂ ಭರ್ಜರಿ ಮಳೆಯಾಗಿದೆ. ಹಾವೇರಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ಐವರು ರೈತರು ಸಾವನ್ನಪ್ಪಿದ್ಧಾರೆ
3/ 11
ವಿಜಯಪುರ ಮತ್ತು ರಾಯಚೂರಿನಲ್ಲಿ ಒಂಬತ್ತು ಕುರಿ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ರಾಯಚೂರಿನಲ್ಲಿ ಸಿಡಿಲಿಗೆ ನಾಲ್ಕು ಎಕರೆ ಕಬ್ಬಿನ ತೋಟ ಸುಟ್ಟು ಕರಕಲಾಗಿದೆ
4/ 11
ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಭೈರಾಪುರ ಕ್ರಾಸ್ನ ಹೊಲದಲ್ಲಿದ್ದ ಕವಿತಾ(27) ಮತ್ತು ಗಂಗಮ್ಮ(45) ಅವರು ಸಿಡಿಲಿಗೆ ಬಲಿಯಾದವರು. ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಸ್ಥಳಕ್ಕೆ ಧಾವಿಸಿ ಬಂದು, ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಘೋಷಣೆ ಮಾಡಿದರು.
5/ 11
ಭೀಮಾ ನದಿ ಪ್ರವಾಹದ ಸಂಕಷ್ಟ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಗೆ ಗಾಯದ ಮೇಲೆ ಬರೆ ಎಳೆದಂತೆ ಮಳೆಯ ಕಾಟ ಬಂದಿದೆ. ಶಹಾಪುರ, ಸುರಪುರ, ಯಾದಗಿರಿ ಮೊದಲಾದೆಡೆ ಇವತ್ತು 2-3 ಗಂಟೆ ಕಾಲ ಧಾರಾಕಾರ ಮಳೆಗೆ ಜನರು ತತ್ತರಿಸಿದ್ದಾರೆ.
6/ 11
ಹಾವೇರಿ ಜಿಲ್ಲೆಯಲ್ಲಿ ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಸೇರಿದಂತೆ ಅನೇಕ ಕಡೆ ವರುಣನ ಆರ್ಭಟವಾಗುತ್ತಿದೆ. ಗುಡುಗು, ಮಿಂಚು, ಸಿಡಿಲಿನ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
7/ 11
ಹಲವು ಕಡೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಬಂದ್ ಮಾಡಿದರು. ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡು ನದಿಯಂತಾಗಿದೆ. ಗದಗ ಜಿಲ್ಲೆಯ ಅನೇಕ ಕಡೆಯೂ ಭರ್ಜರಿ ಮಳೆಯಾಗುತ್ತಿದೆ.
8/ 11
ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು ಮತ್ತು ನಾಗಮಂಗಲ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಮೊದಲಾದ ಕಡೆಯೂ ಜೋರು ಮಳೆಯಾಗಿದೆ.
ರಸ್ತೆ ಗುಂಡಿಗಳಲ್ಲಿ ಮಳೆನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ಗಣೇಶ ನಗರ ಮತ್ತು ಆನಂದ ನಗರದ ರಸ್ತೆಗಳ ತುಂಬ ನೀರು ತುಂಬಿ ಹರಿದಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು ಹಳ್ಳದಂತಾಗಿವೆ.
11/ 11
ಆನಂದ ನಗರದಿಂದ ಸಿದ್ಧರೂಢ ಕ್ರಾಸ್ವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಮಳೆಯ ಹೊಡೆತಕ್ಕೆ ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.