Photos: ಮಲೆನಾಡಲ್ಲಿ ಮಳೆಯ ಅವಾಂತರ; ಶಿವಮೊಗ್ಗದ ಸಾಗರದಲ್ಲಿ ಕುಸಿದ ಸೇತುವೆ, ತೋಟಕ್ಕೆ ನುಗ್ಗಿದ ನೀರು, ಸಂಚಾರಕ್ಕೆ ಜನರ ಪರದಾಟ
Karnataka Rain News:ಮಲೆನಾಡಿನಲ್ಲಿ ಎರಡು ವಾರಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಶಿವಮೊಗ್ಗದ ಪ್ರಮುಖ ನದಿಗಳಾದ ಶರಾವತಿ ಮತ್ತು ತುಂಗಾ ನದಿಗಳು ತುಂಬಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ತೋಟಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ತೀರ್ಥಹಳ್ಳಿಯ ತುಂಗಾ ನದಿ ತುಂಬಿದ್ದು, ಪ್ರಸಿದ್ಧ ರಾಮಕೊಂಡ ಮುಳುಗಡೆಯಾಗಿದೆ. ಶರಾವತಿಯ ಒಳಹರಿವು ಹೆಚ್ಚಾಗಿದ್ದು, ಜೋಗ ಜಲಪಾತಕ್ಕೆ ಮತ್ತೆ ಕಳೆ ಬಂದಿದೆ. ಹಳ್ಳಿಗಳಲ್ಲಿ ಸೇತುವೆಗಳು ಮುರಿದುಬಿದ್ದು ಜನಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ವಾಹನಗಳು ಸಂಚರಿಸಲು ಸಾಧ್ಯವಾಗದೆ ಮಲೆನಾಡಿನ ಜನರು ಗೃಹಬಂಧನ ಅನುಭವಿಸುವಂತಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಕೂಡ ಸಂಚರಿಸಲು ಪರದಾಡುವಂತಾಗಿದೆ
2/ 12
ಸಾಗರ ತಾಲೂಕಿನ ತಲಕಳಲೆಯಲ್ಲಿ ಸೇತುವೆ ಕುಸಿದಿದೆ. ಇದರಿಂದ ರಸ್ತೆ ಮಾರ್ಗ ಕಡಿತಗೊಂಡಿದ್ದು, ಶಾಲೆಗೆ ಹೋಗಲು ದಾರಿಯಿಲ್ಲದೆ ವಿದ್ಯಾರ್ಥಿಗಳು ಸೇತುವೆಯ ಇನ್ನೊಂದು ತುದಿಯಲ್ಲಿ ನಿಂತಿರುವ ದೃಶ್ಯ
3/ 12
ಸಾಗರದ ತಲಕಳಲೆ ಗ್ರಾಮದಲ್ಲಿ ಜೋರಾಗಿ ಮಳೆಯಾಗುತ್ತಿರುವುದರಿಂದ ಗುಡ್ಡದಿಂದ ಹರಿದುಬಂದ ನೀರು ತೋಟಕ್ಕೆ ನುಗ್ಗುತ್ತಿದೆ. ಇದರಿಂದ ಅಪಾರ ಬೆಳೆ ನಾಶವಾಗಿದೆ
4/ 12
ಸಾಗರದಲ್ಲಿ ಅಡಕೆ ತೋಟಕ್ಕೆ ನುಗ್ಗಿರುವ ಮಳೆನೀರು
5/ 12
ಶಿವಮೊಗ್ಗದ ಸಾಗರದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಬಿದ್ದಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
6/ 12
ಹೊಸನಗರದ ಕುರುವಳ್ಳಿ ಬಳಿ ರಸ್ತೆ ಮಟ್ಟಕ್ಕೆ ಬಂದು ನಿಂತಿರುವ ನೀರು
7/ 12
ಹೊಸನಗರದ ಬಳಿ ಕಾರಣಗಿರಿಯಲ್ಲಿ ಮುಳುಗಡೆಯ ಹಂತಕ್ಕೆ ಬಂದಿರುವ ಹಳೇ ಸೇತುವೆ
8/ 12
ಗದ್ದೆಗಳಿಗೆ ನುಗ್ಗಿರುವ ಶರಾವತಿ
9/ 12
ಶಿವಮೊಗ್ಗದ ಹೊಸನಗರದಲ್ಲಿ ಎರಡು ವಾರಗಳಿಂದ ಮಳೆ ನಿಂತಿಲ್ಲ. ಇಲ್ಲಿನ ನಗರ ಕೋಟೆಯ ಬಳಿ ಇರುವ ಕೆರೆ ತುಂಬಿ ಹರಿಯುತ್ತಿದೆ.
10/ 12
ತೀರ್ಥಹಳ್ಳಿಯಲ್ಲಿ ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ಪ್ರಸಿದ್ಧ ಸೇತುವೆ ಮಟ್ಟಕ್ಕೆ ಬರುತ್ತಿರುವ ನೀರಿನಿಂದ ಸೇತುವೆ ಮುಳುಗುವ ಭೀತಿಯಲ್ಲಿ ಜನರಿದ್ದಾರೆ
11/ 12
ಶೃಂಗೇರಿ ದೇವಸ್ಥಾನದ ಪಕ್ಕದಲ್ಲಿರುವ ತುಂಗಾ ನದಿಯ ರೌದ್ರಾವತಾರ
12/ 12
ತೀರ್ಥಹಳ್ಳಿಯ ರಾಮಕೊಂಡ ಮುಳುಗಡೆಯಾಗಿದ್ದು, ರಸ್ತೆಯ ಮೇಲೂ ತುಂಗೆಯ ನೀರು ಹರಿಯುತ್ತಿದೆ