Karnataka Rain News: ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆ; ಇನ್ನೂ 3-4 ದಿನ ಅಬ್ಬರಿಸಲಿರುವ ವರುಣ
Karnataka Rains Today: ಬೆಂಗಳೂರು ಸೇರಿದಂತೆ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಇಂದೂ ಸಹ ರಾಜಧಾನಿಯ ಮಲ್ಲೇಶ್ವರಂ, ಯಶವಂತಪುರ,ವಿಧಾನಸೌಧ ಸುತ್ತಮುತ್ತ, ಮೆಜೆಸ್ಟಿಕ್, ಹೆಬ್ಬಾಳ, ರಾಜಾಜಿನಗರ, ಜಯನಗರ, ಆರ್.ಆರ್, ನಗರ, ಬಸವೇಶ್ವರ ನಗರ, ಶಾಂತಿನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಸಂಜೆ ವೇಳೆಯ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ತೆರಳ್ತಿದ್ದ ವಾಹನ ಸವಾರರಿಗೆ ಕಿರಿಕಿರಿ ಅನುಭವಿಸುವಂತಾಗಿದೆ.
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿ ವೇಗ ಪಡೆದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
2/ 6
ಮುಂದಿನ 4 ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಒಳನಾಡು ಭಾಗದ ಪ್ಲೇ ವ್ಯಾಪಕ ಮಳೆ ಮುನ್ಸೂಚನೆ ಇದೆ.
3/ 6
ರಾಯಚೂರು ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇತ್ತು. ಇಂದು ಮದ್ಯಾಹ್ನದಿಂದ ಸುರಿಯುತ್ತಿರುವ ಮಳೆಯಿಂದ ಹತ್ತಿ ಹಾಗೂ ಭತ್ತ ಬೆಳೆದ ರೈತರಿಗೆ ಬೆಳೆ ಹಾಳಾಗುವ ಭೀತಿ ಎದುರಾಗಿದೆ. ನಿರಂತರ ಮಳೆ ಆದ್ರೆ ಹತ್ತಿ ಮೊಳಕೆಯೊಡೆಯುವ ಆತಂಕದಲ್ಲಿ ಶುರುವಾಗಿದೆ.
4/ 6
ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಕಳಸ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪದಲ್ಲೂ ಮಳೆ ಅಬ್ಬರ ಜೋರಾಗಿದೆ.
5/ 6
ಚಿಕ್ಕಮಗಳೂರಲ್ಲಿ ಬೆಳಗ್ಗೆಯಿಂದಲೂ ಬಿಟ್ಟು-ಬಿಟ್ಟು ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂದಿದೆ. ಅಡಿಕೆ, ಕಾಫಿ, ಮೆಣಸು ಒಣಗಿಸಲಾಗದೆ ಕಂಗಾಲಾಗಿದ್ದಾರೆ.
6/ 6
ರಾಮನಗರದಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗಿದೆ. ಹೊಲ, ರಸ್ತೆಗುಂಡಿಗಳಲ್ಲೂ ತುಂಬಿದ ಮಳೆ ನೀರು. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಸಹ ಸಂಪೂರ್ಣ ಜಲಾವೃತಗೊಂಡಿದೆ.