Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

ಮೇ 10ರ ವೇಳೆಗೆ ಮೋಚಾ ಚಂಡಮಾರುತ ತೀವ್ರ ರೂಪ ಪಡೆದುಕೊಳ್ಳಲಿದ್ದು, ಮೇ 12ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

First published:

  • 17

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆಬ್ಬರಿಸ್ತಿದೆ. ಹೀಗಾಗಿ ನಾಳೆ ನಡೆಯಲಿರುವ ಮತದಾನದ ಮೇಲೆ ವರುಣನ ಕರಿನೆರಳು ಆವರಿಸಿದೆ.

    MORE
    GALLERIES

  • 27

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಮಳೆಯಾಗಿದ್ದು, ನ್ಯಾಷನಲ್‌ ಮಾರ್ಕೆಟ್ ಜಲಾವೃತಗೊಂಡಿದೆ. ನಗರದ ಹಲವೆಡೆ ಮರಗಳು ಧರೆಗುರುಳಿವೆ.

    MORE
    GALLERIES

  • 37

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಏಕಾಏಕಿ ಸುರಿದ ಭಾರಿ ಮಳೆಗೆ ಜನರು ಹೈರಾಣಾರಿದ್ದರು. ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು, ವರಣನ ಆರ್ಭಟಕ್ಕೆ ಸಾರ್ವಜನಿಕರು, ವ್ಯಾಪಾರಿಗಳು ಪರದಾಟ, ಜಲಾವೃತಗೊಂಡ ಮಳೆ ನೀರಿನಲ್ಲಿಯೇ ಜನರ ಓಡಾಟ ನಡೆಸಿದರು.

    MORE
    GALLERIES

  • 47

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಇತ್ತ ಭಾರೀ ಮಳೆಗೆ ಮತಗಟ್ಟೆಯ ಗೋಡೆ ಹಾಗೂ ಮೇಲ್ವಾವಣಿ ಕುಸಿದು ಬಿದ್ದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ನಡೆದಿದೆ. ಶಾಲಾ ಕಟ್ಟಡದ ಗೋಡೆ ಕುಸಿದಿದ್ದು, ಗಾಳಿಗೆ ಮತಗಟ್ಟೆಯ ತಗಡು ಹಾಗೂ ಹಂಚುಗಳು ಹಾರಿಹೋಗಿವೆ. 112 ಸಂಖ್ಯೆಯ ಮತಗಟ್ಟೆ ಹಾಳಾಗಿದೆ.

    MORE
    GALLERIES

  • 57

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಇಂದು ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆ ಅಬ್ಬರ ಜೋರಾಗಿದ್ದು, ಚುನಾವಣಾ ಕರ್ತವ್ಯಕ್ಕೆ ವರುಣನ‌ ಅಡ್ಡಿಪಡಿಸಿದ್ದ. ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಎನ್‌.ಆರ್.ಪುರದಲ್ಲಿ ಮಳೆಯಾಗಿದೆ. ಮಲೆನಾಡ ಕುಗ್ರಾಮದ ಕೆಲ ಭಾಗದಲ್ಲಿ ವಿದ್ಯುತ್ ಸಂಪರ್ಕ‌ ಕಡಿತವಾಗಿದೆ.

    MORE
    GALLERIES

  • 67

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಉಳಿದಂತೆ ಕಳೆದ ಒಂದು ವಾರದಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ನಡುವೆ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಆಗ್ನೇಯ ಭಾಗದಲ್ಲಿ ಮೋಚಾ ಚಂಡಮಾರುತ ಉಂಟಾಗಿದೆ. ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯುವ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    MORE
    GALLERIES

  • 77

    Karnataka Rain Alert: ಮತದಾನದ ಮೇಲೆ ವರುಣನ ಕರಿನೆರಳು! ಇನ್ನೊಂದು ವಾರ ತಪ್ಪಲ್ಲ ಮಳೆ ಕಾಟ

    ಮೇ 10ರ ವೇಳೆಗೆ ಮೋಚಾ ಚಂಡಮಾರುತ ತೀವ್ರ ರೂಪ ಪಡೆದುಕೊಳ್ಳಲಿದ್ದು, ಮೇ 12ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES