Karnataka Politics: ಕಾಂಗ್ರೆಸ್ ಹೈಕಮಾಂಡ್ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!
ಅಂತೂ ಇಂತೂ ಚುನಾವಣಾ ಭರಾಟೆ ಒಂದು ಹಂತದಲ್ಲಿ ಕೊನೆಗೊಂಡಿದೆ. ಕಾಂಗ್ರೆಸ್ ಗೆಲುವಿನ ಬಳಿಕ ಆರಂಭವಾಗಿದ್ದ ಸಿಎಂರೇಸ್ನಲ್ಲಿ ಸಿದ್ದರಾಮಯ್ಯ ಮುಂಚೂಣಿ ಕಾಪಾಡಿಕೊಂಡಿದ್ದು, ಶನಿವಾರ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದೆ. ಆದರೀಗ ಸಿಎಂ ಯಾರೆಂಬ ತಲೆನೋವು ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯಕ್ಕೆ ಮತ್ತೊಂದು ತಲೆನೋವು ಕಾಡಲಾರಂಭಿಸಿದೆ.
ಹೌದು ಸಿದ್ದರಾಮಯ್ಯಗೆ ಸಿಎಂ ಹಾಗೂ ಡಿಕೆಶಿಗೆ ಡಿಸಿಎಂ ಸ್ಥಾನ ನೀಡಿದ ಕಾಂಗ್ರೆಸ್ ಹೈಕಮಾಂಡ್ಗೆ ಇಬ್ಬರ ಬಣದವರಿಗೆ ಮಂತ್ರಿ ಸ್ಥಾನ ನೀಡುವುದೇ ಸವಾಲಾಗಿದೆ.
2/ 7
ಈ ವಿಚಾರವಾಗಿ ಚರ್ಚಿಸಲು ಇಂದು ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲದೇ ಇಬ್ಬರೂ ನಾಯಕರು ತಮ್ಮ ತಮ್ಮ ಬಣದವರಿಗೆ ಸಂಪುಟದಲ್ಲಿ ಹೆಚ್ಚು ಸ್ಥಾನ ಕೊಡಿಸಲು ಪಟ್ಟಿಯನ್ನೂ ಸಿದ್ದಪಡಿಸಿದ್ದಾರೆ.
3/ 7
ತಮ್ಮ ಬಣದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ದಪಡಿಸಿಕೊಂಡಿರುವ ನಾಯಕರು ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ವರಿಷ್ಠರ ಬಳಿ ಇಂದು ಕಸರತ್ತು ನಡೆಸುತ್ತಿದ್ದಾರೆ.
4/ 7
ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ನಡುವೆ ಸಿಎಂ ಆಯ್ಕೆಯ ಸವಾಲು ಎದುರಿಸಿದ್ದ ಹೈಕಮಾಂಡ್ಗೆ ಈಗ ಅವರ ಬಣದವರಿಗೆ ಮಂತ್ರಿ ಸ್ಥಾನ ಕೊಡಿಸಬೇಕಾದ ಸವಾಲು ಎದ್ದಿದೆ.
5/ 7
ಮತ್ತೊಂದೆಡೆ ನಾಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಭರದ ಸಿದ್ಧತೆ ಆರಂಭವಾಗಿದೆ.
6/ 7
ಫ್ಲೆಕ್ಸ್ ಹಾಗೂ ಬ್ಯಾನರ್ಗಳು ಈಗಾಗಲೃಏ ರಾರಾಜಿಸುತ್ತಿದ್ದು, ಬ್ಯಾನರ್ಗಳಲ್ಲಿ ಸಿದ್ದರಾಮಯ್ಯ ಪೋಟೊ ಹಾಕಿ ಶುಭಾಶಯ ಕೋರಲಾಗಿದೆ.
7/ 7
ಮತ್ತೊಂದೆಡೆ ಲಾರಿಗಳಲ್ಲಿ ಬ್ಯಾರಿಕೇಡ್, ರೆಡ್ ಮ್ಯಾಟ್, ಹಾಗೂ ಸೌಂಡ್ ಸ್ಪೀಕರ್ಗಳನ್ನೂ ರವಾನಿಸಲಾಗುತ್ತಿದೆ.
First published:
17