Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

Karnataka Weather Report: ಮುಂದಿನ ನಾಲ್ಕು ದಿನ ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.

First published:

  • 17

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ಆರಕ್ಕೂ ಅಧಿಕ ಸಾವುಗಳಾಗಿವೆ. ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

    MORE
    GALLERIES

  • 27

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಭಾನುವಾರ ಸುರಿದ ಮಳೆಗೆ ರಾಜಧಾನಿಯಲ್ಲಿ ಸುಮಾರು 80ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿದ್ದವು. ಇದರಿಂದ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

    MORE
    GALLERIES

  • 37

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಸೋಮವಾರವೂ ರಾಜಧಾನಿ ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ಭಾಗದಲ್ಲಿ ಮಳೆಯಾಗಿದೆ. ಕೋಲಾರ ಭಾಗದಲ್ಲಿ ಮಾವು ಬೆಳೆ ಮಳೆಗೆ ನಷ್ಟವಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.

    MORE
    GALLERIES

  • 47

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಇಂದಿನಿಂದ ರಾಜ್ಯದಲ್ಲಿ ನಾಲ್ಕು ದಿನ ಮಳೆಯಾಗುವನ ಸಾಧ್ಯತೆಗಳಿವೆ. ಕಳೆದ ಒಂದು ವಾರದಿಂದ ಉತ್ತರ ಒಳನಾಡು ಭಾಗದಲ್ಲಿ ಅಧಿಕ ತಾಪಮಾನ ದಾಖಲಾಗಿತ್ತು. ಇಂದಿನಿಂದ ನಾಲ್ಕು ದಿನ ಉತ್ತರ ಒಳನಾಡು ಭಾಗದಲ್ಲಿಯೂ ಮಳೆಯಾಗ್ತಿದೆ.

    MORE
    GALLERIES

  • 57

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಕಾರವಾರದ ಅಂಕೋಲಾದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ಕೆಲವು ಕಡೆ ಮರಗಳು ನೆಲಕ್ಕುರುಳಿವೆ.  ಏಕಾಏಕಿ ಸುರಿದ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ.

    MORE
    GALLERIES

  • 67

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಚಾಮರಾಜನಗರ ಜಿಲ್ಲೆಯ ಹಲವೆಡೆ ಭಾರಿ ಬಿರುಗಾಳಿ ಸಹಿತ ಮಳೆ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಹಾಗೂ ಬಾಚಹಳ್ಳಿ ಗ್ರಾಮದ ಹಲವು ಮನೆಗಳು ಹಾನಿಯಾಗಿದೆ. ಮನೆ ಮೇಲೆ ಮರ ಬಿದ್ದಿದ್ದು,  ಬಿರುಗಾಳಿಗೆ ಹೆಂಚುಗಳು ಹಾರಿಹೋಗಿದೆ. ಕೂದಲೆಳೆ ಅಂತರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಾಯದಿಂದ ಪಾರಾಗಿದೆ.

    MORE
    GALLERIES

  • 77

    Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ

    ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ  ಸಿಡಿಲಿಗೆ ತೆಂಗಿನ ಮರ  ಹೊತ್ತಿ ಉರಿದಿದೆ.  ಮಳೆ ಗಾಳಿಯೊಂದಿಗೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಬೆಂಕಿಯನ್ನು ನಂದಿಸಲು ಮನೆಯವರ ಹರಸಾಹಸ ಪಟ್ಟಿದ್ದಾರೆ.

    MORE
    GALLERIES