Karnataka Covid Rules: ತನ್ನದೇ ಕೊರೊನಾ ಕ್ವಾರಂಟೈನ್ ನಿಯಮ ಹಿಂಪಡೆದ ಕರ್ನಾಟಕ ಸರ್ಕಾರ
ಈ ಮುನ್ನ ಹೈರಿಸ್ಕ್ ದೇಶಗಳಿಂದ ಆಗಮಿಸುವ ರೋಗಲಕ್ಷಣ ಇಲ್ಲದ ಪ್ರಯಾಣಿಕರಿಗೂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈ ಆದೇಶವಿಲ್ಲ ಎಂದು ಈ ಆದೇಶವನ್ನು ಹಿಂಪಡೆಯಲಾಗಿದೆ.
ಕೊರೊನಾ ಸೋಂಕಿನ ಭೀತಿ ಹೆಚ್ಚಿರುವ ಹೈ-ರಿಸ್ಕ್ ದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಪ್ರಕಟಿಸಿದೆ. (ಸಾಂದರ್ಭಿಕ ಚಿತ್ರ)
2/ 9
ಕೋವಿಡ್ ಹೈರಿಸ್ಕ್ ದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಕಾಲ ಕ್ವಾರಂಟೈನ್ ಎಂಬ ಹಳೆಯ ಆದೇಶವನ್ನು ವಾಪಸ್ ಪಡೆದು ರಾಜ್ಯ ಸರ್ಕಾರ ಆದೇಶಿಸಿದೆ. (ಸಾಂದರ್ಭಿಕ ಚಿತ್ರ)
3/ 9
ಈ ಮುನ್ನ ಹೈರಿಸ್ಕ್ ದೇಶಗಳಿಂದ ಆಗಮಿಸುವ ರೋಗಲಕ್ಷಣ ಇಲ್ಲದ ಪ್ರಯಾಣಿಕರಿಗೂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. (ಸಾಂದರ್ಭಿಕ ಚಿತ್ರ)
4/ 9
ಆದರೆ ರಾಜ್ಯ ಸರ್ಕಾರ ಈ ಮುನ್ನ ತಾನು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈ ಆದೇಶವಿಲ್ಲ ಎಂದು ಈ ಆದೇಶವನ್ನು ಹಿಂಪಡೆಯಲಾಗಿದೆ. (ಸಾಂದರ್ಭಿಕ ಚಿತ್ರ)
5/ 9
ಇತರ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಆರ್-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಆದರೆ ಕ್ವಾರಂಟೈನ್ ಬಗ್ಗೆ ಯಾವುದೇ ನಿಯಮ ರೂಪಿಸಿರಲಿಲ್ಲ.
6/ 9
ಹೀಗಾಗಿ ಏಳು ದಿನಗಳ ಹೋಂ ಕ್ವಾರಂಟೈನ್ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. (ಸಾಂದರ್ಭಿಕ ಚಿತ್ರ)
7/ 9
ಕರ್ನಾಟಕದಲ್ಲಿ XBB.1.5. ವೈರಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಒಮಿಕ್ರಾನ್ನ ಮತ್ತೊಂದು ರೂಪಾಂತರಿಯೇ ಈ XBB.1.5 ಆಗಿದೆ. (ಸಾಂದರ್ಭಿಕ ಚಿತ್ರ)
8/ 9
ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಲು ಕಾರಣವಾಗಿದ್ದು ಇದೇ ವೈರಸ್. ಹೀಗಾಗಿ ಈ ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. (ಸಾಂದರ್ಭಿಕ ಚಿತ್ರ)
9/ 9
ಸದ್ಯ ಭಾರತದ ಇತರ ರಾಜ್ಯಗಳನ್ನು ಗಮನಿಸುವುದಾದರೆ ರಾಜಸ್ಥಾನದಲ್ಲಿ 1 ಕೇಸ್, ಗುಜರಾತ್ನಲ್ಲಿ 3 ಕೇಸ್ ಹಾಗೂ ಕರ್ನಾಟಕದಲ್ಲಿ XBB.1.5. ವೈರಸ್ನ ಒಂದು ಕೇಸ್ ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)