Super 30 Programme: ರಾಜ್ಯದ ಪ್ರತಿ ಜಿಲ್ಲೆಯ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರ್ 30 ಕಾರ್ಯಕ್ರಮ
ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣದ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಪರ್ 30 ಕಾರ್ಯಕ್ರಮ ಪ್ರಾರಂಭಿಸಲು ಮುಂದಾಗಿದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಜಿಲ್ಲೆಯಲ್ಲಿಯ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನ್ನು ಉತ್ಕೃಷ್ಟ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಬೆಂಗಳೂರು ನಗರ ಹೊರತುಪಡಿಸಿ ಪ್ರತಿ ಜಿಲ್ಲೆಯಲ್ಲೂ ಈ ಯೋಜನೆ ಬರಲಿದೆ. (ಸಾಂದರ್ಭಿಕ ಚಿತ್ರ)
2/ 8
ಸೂಪರ್ 30 ಯೋಜನೆಯಂತೆ ಪ್ರತಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಸರ್ಕಾರಿ ಕಾಲೇಜ್ ಇರದಿದ್ರೆ ಖಾಸಗಿ ಕಾಲೇಜಿನ ಸಾಮಾರ್ಥ್ಯ ಮತ್ತು ಶಿಕ್ಷಣದ ಗುಣಮಟ್ಟ ಆಧರಿಸಿ ಆಯ್ಕೆ ಮಾಡಿಕೊಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 8
ಆದರೆ ಆಯ್ಕೆಯಾದ ಖಾಸಗಿ ಕಾಲೇಜು ಉನ್ನತ ಶಿಕ್ಷಣ ಸಂಸ್ಥೆ ಎಂದರ್ಥ ಅಲ್ಲ. ಕೆಳಹಂತದಿಂದಲೇ ಕಾಲೇಜಿನ ಮೌಲ್ಯಮಾಪನ ಮಾಡುವ ಮೂಲಕ ಸೂಪರ್ 30ಗೆ ಆಯ್ಕೆ ಮಾಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
4/ 8
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಬರುವಂತಾಗಿದೆ. ಈ ವಲಸೆಯನ್ನು ತಾಲೂಕು ಮಟ್ಟದಲ್ಲಿಯೇ ತಡೆಯುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. (ಸಾಂದರ್ಭಿಕ ಚಿತ್ರ)
5/ 8
ಈ ಮೂಲಕ ಸಂಶೋಧನೆ, ಕೈಗಾರಿಕೆ ಮತ್ತು ಬೋಧನಾ ಕ್ಷೇತ್ರದ ಕಾಲೇಜುಗಳ್ನು ಅಭಿವೃದ್ಧಿಪಡಿಸಲಾಗುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೋಧನೆ ಮತ್ತು ಸಂಶೋಧನೆಯ ಉಸ್ತುವಾರಿಯನ್ನು ತೆಗೆದುಕೊಳ್ಳಲಿದೆ. (ಸಾಂದರ್ಭಿಕ ಚಿತ್ರ)
6/ 8
ಸೂಪರ್ 30 ಯೋಜನೆಗಾಗಿ ವಿಟಿಯುನ ಉಪ ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದೆ. ಇಂಟರ್ನ್ ಶಿಪ್, ಉದ್ಯೋಗವಕಾಶ, ಅಧ್ಯಾಪಕರಿಗೆ ತರಬೇತಿ ಮತ್ತು ಇತರೆ ಸೌಲಭ್ಯಗಳನ್ನು ಇಲ್ಲಿ ಕೇಂದ್ರಿಕರಿಸಲಾಗುತ್ತದೆ (ಸಾಂದರ್ಭಿಕ ಚಿತ್ರ).
7/ 8
ಸೂಪರ್ 30 ಯೋಜನೆಯಡಿಯಲ್ಲಿ ಯಾವುದೇ ಹೊಸ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತಿಲ್ಲ. ಸದ್ಯ ಇರೋ ಕಾಲೇಜುಗಳನ್ನು ಉನ್ನತ ಮಟ್ಟಕ್ಕೆ ಅಂದ್ರೆ ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಕೆಯ ಆಯುಕ್ತ ಪ್ರದೀಪ್ ಪಿ. ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಈ ಯೋಜನಗೆ ಆಯ್ಕೆಯಾದ ಕಾಲೇಜಿನ ಶೈಕ್ಷಣಿಕ ಕೆಲಸ, ಸಂಶೋಧನೆ, ಬೋಧನೆ, ಮೂಲಸೌಕರ್ಯಗಳ ವಿಚಾರದಲ್ಲಿ ಬೆಂಬಲ ನೀಡಲಾಗುತ್ತದೆ. ಇನ್ನೂ ಹಣಕಾಸಿನ ನೆರವು ವಿಷಯದಲ್ಲಿ ವಿಟಿಯು, ಕಾಲೇಜು ಮತ್ತು ಉದ್ಯಮಗಳಿಂದ ಒದಗಿಸಲಾಗುತ್ತದೆ ಎಂದು ಪ್ರದೀಪ್ ಪಿ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)