ಇದೀಗ ಗೃಹ ಬಳಕೆಯೂ ಸೇರಿದಂತೆ ಎಲ್ಲಾ ಬಗೆಯ ವಿದ್ಯುತ್ ದರ ಇಳಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುಳಿವನ್ನು ಇಂಧನ ಸಚಿವ ಸುನಿಲ್ ಕುಮಾರ್ ಸುಳಿವು ನೀಡಿದ್ದಾರೆ.
2/ 7
ಬಳಕೆದಾರರ ಶುಲ್ಕ ಕಡಿಮೆ ಉದ್ದೇಶವನ್ನು ಸರ್ಕಾರ ಹೊಂದಿದೆ. ಶೀಘ್ರದಲ್ಲಿಯೇ 70 ಪೈಸೆಯಿಂದ 2 ರೂಪಾಯಿವರೆಗೂ ದರ ಇಳಿಕೆಯಾಗುವ ನಿರೀಕ್ಷೆಗಳಿವೆ. ಹೊಸ ವರ್ಷಕ್ಕೂ ಮುನ್ನವೇ ದರಗಳು ಇಳಿಕೆಯಾಗಲಿವೆ. ಇಂಧನ ಸಚಿವರ ಸೂಚನೆ ಮೇರೆಗೆ ಪ್ರಸ್ತಾಪ ಸಿದ್ಧಪಡಿಸಿದೆ.
3/ 7
ವಾರ್ಷಿಕದರ ಪರಿಷ್ಕರಣೆ ವೇಳೆಯಲ್ಲಿಯ ದರ ಏರಿಕೆಯೂ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಿತ್ತು. ಈ ಕಾರಣದಿಂದ ವಿದ್ಯುತ್ ಸರಬರಾಜು ಕಂಪನಿಗಳಿಂದ ಕೆಇಆರ್ಸಿಗೆ ಸಲ್ಲಿಸುವ ಪ್ರಸ್ತಾವದಲ್ಲಿ ಬಳಕೆದಾರರ ಶುಲ್ಕ ತಗ್ಗಿಸುವಂತೆ ಸೂಚಿಸಲಾಗಿತ್ತು.
4/ 7
ಎಚ್ಟಿ ಗ್ರಾಹಕರಿಗೆ ಸಮಾಯಾಧರಿತ ವಿದ್ಯುತ್ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಹೊಸ ವ್ಯವಸ್ಥೆಯಲ್ಲಿ 75 ಪೈಸೆಗಳಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.
5/ 7
ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯ್ತಿ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆದಿವೆ,
6/ 7
ಈ ಪ್ರಸ್ತಾವ ವಾಣಿಜ್ಯ, ಕೈಗಾರಿಕೆ, ಎಚ್ಟಿ ಮತ್ತು ಎಲ್ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ಇನ್ನು ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಸಡಿಲಿಸುವ ಕುರಿತು ಸಹ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ಶುಲ್ಕ ಪದ್ಧತಿ ಜಾರಿತರುವ ಕುರಿತು ಪಸ್ತಾವನೆ ಸಲ್ಲಿಸಲಾಗಿದೆ.
7/ 7
ಅನಗತ್ಯ ಖರ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನಪರ ನಿಲುವುಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.