ಕರ್ನಾಟಕ ಪ್ರವಾಹ: ನೆರೆಯ ಹೊಡೆತಕ್ಕೆ ನಲುಗಿದ ಉತ್ತರ ಕರ್ನಾಟಕ; ಬೆಳಗಾವಿಯ ಉದಗತ್ತಿಯಲ್ಲಿ ಮುಂದುವರೆದ ರಕ್ಷಣಾ ಕಾರ್ಯ
Karnataka Rains: ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಜಿಲ್ಲೆಯ 14 ತಾಲೂಕುಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೆ ಬೆಳಗಾವಿಯ ಸುಮಾರು 30 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಇಲ್ಲಿನ ಜನರಿಗಾಗಿ 327 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೆಳಗಾವಿಯಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಿದ್ದು, ನೀರಿನ ನಡುವೆ ಸಿಲುಕಿಕೊಂಡವರನ್ನು ಎನ್ಡಿಆರ್ಎಫ್ ಸಿಬ್ಬಂದಿ ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ.
2/ 5
ಪ್ರವಾಹದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಿದ ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸಂತ್ರಸ್ತರನ್ನು ರಕ್ಷಿಸಿ ಗಂಜಿಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ.
ಘಟಪ್ರಭಾ ನದಿಯಲ್ಲಿ ಭಾರೀ ಪ್ರವಾಹ ಹಿನ್ನೆಲೆ ಮೆಳವಂಕಿ, ಕೋಲಾರ ಕೊಪ್ಪ ಗ್ರಾಮಗಳ ಜನರ ಶಿಫ್ಟ್ ಮಾಡಲಾಗಿದೆ. ಉಪ್ಪಾರಟ್ಟಿ ಗ್ರಾಮದ ಶಾಲೆ, ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಉಪ್ಪಾರಟ್ಟಿ ಗ್ರಾಮಸ್ಥರಿಂದ ನಿರಾಶ್ರಿತ ಜನರಿಗೆ ಊಟ, ಜನರಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ.
5/ 5
ಬೆಳಗಾವಿಯ ಉದಗತ್ತಿಯ ಸಂತ್ರಸ್ಥರನ್ನು ದೋಣಿಯ ಮೂಲಕ ಗಂಜಿಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.