Karnataka Flood Photos: ಕರ್ನಾಟಕ ಪ್ರವಾಹದ ಭೀಕರತೆ ತೆರೆದಿಡುವ ಫೋಟೋಗಳು ಇಲ್ಲಿವೆ...

ಕರ್ನಾಟಕ ಪ್ರವಾಹ: ಕರ್ನಾಟಕದಲ್ಲಿ ಕಳೆದ 20 ದಿನಗಳಿಂದ ಭಾರೀ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿದೆ. ಈ ಪ್ರವಾಹದಲ್ಲಿ ಇದುವರೆಗೂ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2738 ಗ್ರಾಮಗಳು ಪ್ರವಾಹಪೀಡಿತವಾಗಿವೆ. 6,73,559 ಜನರನ್ನು ರಕ್ಷಣಾ ಸಿಬ್ಬಂದಿ ಇದುವರೆಗೂ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ್ದಾರೆ. 1224 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. 40ಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋಗಿವೆ. 60 ವರ್ಷಗಳಲ್ಲೇ ಅತಿ ಭೀಕರ ಪ್ರವಾಹ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ಸಿಬ್ಬಂದಿ ಸತತವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ಪ್ರವಾಹದ ಸಮಗ್ರ ಘಟನೆಯನ್ನು ಕಟ್ಟಿಕೊಡುವ ಫೋಟೋಗಳು ಇಲ್ಲಿವೆ...

  • News18
  • |
First published: