Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾನಾ ಬದಲಾವಣೆಗಳು ಕಂಡು ಬರುತ್ತಿವೆ. ಒಂದೆಡೆ ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎದುರಾಳಿಗಳನ್ನು ಕಟ್ಟಿ ಹಾಕಲು ಯತ್ನಿಸುತ್ತಿದ್ದರೆ, ಇತ್ತ ಹಲವು ಟಿಕೆಟ್​ ವಂಚಿತರು ಪಕ್ಷಾಂತರವಾಗುತ್ತಿದ್ದಾರೆ. ಸದ್ಯ ಈ ಬೆಳವಣಿಗೆಗಳ ಮಧ್ಯೆ ಹೆಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವ ಮಾತುಗಳು ಜೋರಾಗಿವೆ.

First published:

  • 17

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಹೌದು ರಾಜಕೀಯ ಕಣದಲ್ಲಿ ಯಾವಾಗ ಯಾವ ಬೆಳವಣಿಗೆ ಸಂಭವಿಸುತ್ತದೆ ಎಂದು ಊಹಿಸುವುದೂ ಅಸಾಧ್ಯ. ಸದ್ಯ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುತ್ತಾರೆಂಬ ವಿಚಾರ ಅನೇಕರನ್ನು ಅಚ್ಚರಿಗೀಡು ಮಾಡಿದೆ. ಹೀಗಿರುವಾಗ ಅತ್ತ ಬಿಜೆಪಿ ಇದಕ್ಕೆ ಪ್ರತಿತಂತ್ರ ಹೆಣೆಯಲೂ ಸಜ್ಜಾಗಿದೆ.

    MORE
    GALLERIES

  • 27

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಇತ್ತ ಬಿಜೆಪಿ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಆಗುತ್ತಿದ್ದಂತೆಯೇ ಖುದ್ದು ಸುಮಲತಾರನ್ನು ಕಣಕ್ಕಿಳಿಸಲು ಮುಂದಾಗಿದೆ.

    MORE
    GALLERIES

  • 37

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಸುಮಲತಾ ಆಪ್ತವಲಯದಿಂದ ನ್ಯೂಸ್ 18 ಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ಮಂಡ್ಯದಲ್ಲಿ ಚುನಾವಣೆ ಯುದ್ದಕ್ಕೆ ಜೆಡಿಎಸ್ ಬಿಜೆಪಿ ಸನ್ನದ್ದವಾಗಿದ್ದು, ಈ ಬಾರಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಫೈಟ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

    MORE
    GALLERIES

  • 47

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಒಂದು ವೇಳೆ ಕುಮಾರಸ್ವಾಮಿ ಸ್ಪರ್ಧಿಸಿದರೆ ಇದಕ್ಕೆ ತಕ್ಕ ದಾಳ ಉರುಳಿಸಲು ಸಜ್ಜಾಗಿರುವ ಕಮಲ ಪಾಳಯ ನಾಮಪತ್ರ ಸಲ್ಲಿಸಲು ಸಿದ್ದವಾಗಿರುವಂತೆ ಸುಮಲತಾಗೆ ಸೂಚಿಸಿದೆ. ಟಿಕೆಟ್​ ಕಗ್ಗಂಟು ಏರ್ಪಟ್ಟಿರುವುದರಿಂದ ಮಂಡ್ಯದಲ್ಲಿ ಕುಮಾರಸ್ವಾಮಿಯೇ ಕಣಕ್ಕಿಳಿಯಲು ಮುಂದಾಗಿದ್ದಾರೆನ್ನಲಾಗಿದೆ.

    MORE
    GALLERIES

  • 57

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಹೀಗಿರುವಾಗ ಹೈಕಮಾಂಡ್ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಲು ಸುಮಲತಾ ಡಾಕ್ಯುಮೆಂಟ್ ಸಿದ್ದಪಡಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಇನ್ನು ಈ ವಿಚಾರ ಬಯಲಾದ ಬಳಿಕ ಮಂಡ್ಯ ಅಖಾಡ ಭಾರೀ ಕುತೂಹಲ ಮೂಡಿಸಿದೆ.

    MORE
    GALLERIES

  • 67

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಈ ಬಗ್ಗೆ ತಿಂಗಳ ಹಿಂದೆಯೇ ಚರ್ಚೆ ಹುಟ್ಟಿಕೊಂಡಿತ್ತು, ಕುಮಾರಸ್ವಾಮಿ ಮಂಡ್ಯದಿಂದಲೂ ಸ್ಪರ್ಧಿಸುತ್ತಾರೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಸುಮಲತಾ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳು ಗರಿಗೆದರಿದ್ದವು.

    MORE
    GALLERIES

  • 77

    Karnataka Elections: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಫಿಕ್ಸ್? ಅತ್ತ ಸುಮಲತಾಗೆ ಬಿಜೆಪಿ ಮಹತ್ವದ ಆದೇಶ!

    ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎಚ್‌ಡಿಕೆ ಚನ್ನಪಟ್ಟಣದಿಂದ ಮಾತ್ರ ಸ್ಪರ್ಧಿಸಲಾಗುವುದು ಎಂದಿದ್ದರು, ಅಲ್ಲಿಂದ ಚರ್ಚೆ ತಣ್ಣಗಾಗಿತ್ತು ಎಂಬುವುದು ಉಲ್ಲೇಖನೀಯ.

    MORE
    GALLERIES