Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

ಕರ್ನಾಟಕ ಚುನಾವಣೆಗೆ ರಾಜ್ಯದ ಮತದಾರರು, ಪಕ್ಷಗಳು, ನಾಯಕರು ಎಲ್ಲರೂ ಸಜ್ಜಾಗುತ್ತಿದ್ದಾರೆ. ಪಕ್ಷಗಳನ್ನು ಬೆಂಬಲಿಸಲು ಈಗಾಗಲೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಲಗ್ಗೆ ಇಡಲಾರಂಭಿಸಿದ್ದಾರೆ. ಆದರೀಗ ಈ ಪ್ರಚಾರ ಭರಾಟೆ ಮಧ್ಯೆ ಬಿಜೆಪಿಗೆ ಸಂಕಷ್ಟ ಬಂದೊದಗಿದೆ.

First published:

  • 18

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಹೌದು ಬಿಜೆಪಿ ಶಾಸಕನೊಬ್ಬ ಅಧಿಕಾರ ದುರುಪಯೋಗಪಡಿಸಿಕೊಂಡು ಕುಟುಂಬದ ಸದಸ್ಯರಿಗೆ ಸರ್ಕಾರೀ ಯೋಜನೆ ಮಾಡಿಸಿಕೊಂಡ ಆರೋಪ ಕೇಳಿ ಬಂದಿದೆ. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗಿದು ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

    MORE
    GALLERIES

  • 28

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಕೊಪ್ಪಳದ ಕನಕಗಿರಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಸವರಾಜ್ ದಡೇಸುಗೂರು ಅವರು ಅಧಿಕಾರ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

    MORE
    GALLERIES

  • 38

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಕುಟುಂಬಸ್ಥರ ಜಮೀನಿಗಾಗಿ ಸರ್ಕಾರಿ ಯೋಜನೆ ಬಳಕೆ‌ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.

    MORE
    GALLERIES

  • 48

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಕರ್ನಾಟಕ ನೀರಾವರಿ ನಿಗಮ ನಿಯಮಿತದ ಯೋಜನೆಯ ಲಾಭ ಪಡೆದುಕೊಳ್ಳಲು ಅಧಿಕಾರ ದುರ್ಬಳಕೆ‌ ಮಾಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್​ ನಾಯಕರು ಈ ವಿಚಾರವಾಗಿ ದಾಖಲೆಗಳನ್ನೂ ಸಲ್ಲಿಸಿದ್ದಾರೆ.

    MORE
    GALLERIES

  • 58

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ನೀರಾವರಿ ನಿಯಮಿತದ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ವಿಭಾಗದಲ್ಲಿ ಏತ ನೀರಾವರಿ ಯೋಜನೆ ಪಡೆದುಕೊಳ್ಳಲು ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.

    MORE
    GALLERIES

  • 68

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಶಾಸಕ ಬಸವರಾಜ ದಡೇಸುಗೂರು ಪತ್ನಿ ಸರೋಜಮ್ಮ, ತಂದೆ ದುರುಗಪ್ಪ ದಢೇಸುಗೂರು ಹಾಗೂ ಮಗ ಮೌನೇಶ ದಢೇಸುಗೂರು ಹೆಸರಿನ‌ ಜಮೀನಿಗೆ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಸದ್ಯ ಕುಟುಂಬಸ್ಥರ ಸ್ವಹಿತಕ್ಕೆ ಶಾಸಕರು ಯೋಜನೆ ಬಳಕೆ ಮಾಡಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

    MORE
    GALLERIES

  • 78

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಸಿಂಧನೂರು ಕ್ಷೇತ್ರ ವ್ಯಾಪ್ತಿಯ ಸಾಲಗುಂದ ಹಾಗೂ ಬಾದರ್ಲಿ ಹೋಬಳಿಯಲ್ಲಿ ಕುಟುಂಬಸ್ಥರ ಹೆಸರಿನಲ್ಲಿರುವ ಜಮೀನಿಗೆ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ‌ಮುಖಂಡ ಅಮರೇಶ್ ಗೋನಾಳ ಆರೋಪ ಮಾಡಿದ್ದಾರೆ.

    MORE
    GALLERIES

  • 88

    Karnataka BJP: ಅಧಿಕಾರ ದುರುಪಯೋಗ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ!

    ಕರ್ನಾಟಕ ರಾಜ್ಯ ಚುನಾವಣೆಗೆ ಇನ್ನು ಕೇವಲ ಐದು ದಿನಗಳು ಬಾಕಿ ಇದ್ದು, ಅಷ್ಟರಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈ ಸೇರುತ್ತೆ ಎಂಬುವುದು ನಿರ್ಧಾರವಾಗಲಿದೆ.

    MORE
    GALLERIES