Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್​ಡೌನ್ ಆರಂಭವಾಗಿದೆ. ಹೀಗಿರುವಾಗ ಎಲ್ಲಾ ಪಕ್ಷಗಳು ಮತದಾರರನ್ನು ಓಲೈಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ರಾಷ್ಟ್ರೀಯ ನಾಯಕರೂ ರಾಜ್ಯ ಪ್ರವಾಸ ಕೈಗೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಪಿಎಂ ಮೋದಿ ಸಿಲಿಕಾನ್ ಸಿಟಿಯಲ್ಲಿ ರೋಡ್​ಶೋ ನಡೆಸುತ್ತಿದ್ದು ಇದಕ್ಕೂ ಮುನ್ನ ಪೊಲೀಸರು ಅಲ್ಲಿನ ಸ್ಥಳೀಯರಿಗೆ ನೋಟಿಸ್​ ನೀಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಹೌದು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ಹಾಗೂ ಬಿಜೆಪಿಗೆ ರಾಷ್ಟ್ರೀಯ ನಾಯಕರ ಬಲ ಸಿಕ್ಕಿದೆ.

    MORE
    GALLERIES

  • 27

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಸದ್ಯ ಬಿಜೆಪಿ ನಾಯಕರಾದ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಜ್ಯಕ್ಕಾಗಮಿಸಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

    MORE
    GALLERIES

  • 37

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಇನ್ನು ನಾಳೆ ಶನಿವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ಶೋ ನಡೆಯಲಿದ್ದು, ಇದಕ್ಕೂ ಮುನ್ನ ಈ ಹಾದಿಯಲ್ಲಿರುವ ಮನೆಗಳಿಗೆ ಹಾಗೂ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ.

    MORE
    GALLERIES

  • 47

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಪೊಲೀಸರು ನೀಡಿರುವ ನೋಟಿಸ್​ನಲ್ಲಿ ಮನೆಗಳ ಬಾಲ್ಕನಿ, ಟೆರೆಸ್ ಮೇಲೆ ನಿಂತು ಯಾರೂ ಈ ರೋಡ್​ ಶೋ ವೀಕ್ಷಣೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೇ ಈ ರೋಡ್​ ಶೋ ಮುಗಿಯುವವರೆಗೆ ವಾಹನಗಳನ್ನೂ ಹೊರತರುವಂತಿಲ್ಲ.

    MORE
    GALLERIES

  • 57

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಇನ್ನು ಕಟ್ಟಡದ ಒಳ ಮತ್ತು ಹೊರ ಹೋಗುವ ಮಾರ್ಗ ಬಂದ್ ಮಾಡುವಂತೆಯೂ ನೋಟಿಸ್​ನಲ್ಲಿ ಸೂಚಿಸಲಾಗಿದ್ದು, ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು ಎಂದು ಸೂಚಿಸಲಾಗಿದೆ.

    MORE
    GALLERIES

  • 67

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಇನ್ನು ಪಿಎಂ ಮೋದಿ ರ್ಯಾಲಿ ನೋಡ ಬಯಸುವವರು ನಿಗದಿತ ಸ್ಥಳಕ್ಕೆ ಆಗಮಿಸಿ ವೀಕ್ಷಿಸಬೇಕು. ಭದ್ರತೆ ದೃಷ್ಟಿಯಿಂದ ಪೊಲೀಸರ ಜೊತೆ ಸಹಕರಿಸುವಂತೆ ಈ ನೋಟಿಸ್​ನಲ್ಲಿ ಮನವಿ ಮಾಡಲಾಗಿದೆ.

    MORE
    GALLERIES

  • 77

    Karnataka Elections: ಮೋದಿ ರೋಡ್​ ಶೋ: ಮನೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪೊಲೀಸ್ ನೋಟಿಸ್!

    ಪುಟ್ಟೇನಹಳ್ಳಿ ಪೊಲೀಸರಿಂದ ಜೆ ಪಿ ನಗರ ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ.

    MORE
    GALLERIES