Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

ಲೋಕಸಭಾ ಚುನಾವಣೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಸರಿಯಾದ ದಾಖಲೆ ಸಲ್ಲಿಸದ ಕಾರಣ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳನ್ನ ಡಿಸ್​ಕ್ವಾಲಿಫೈ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

First published:

  • 17

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ ಗಮನ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಕೇಂದ್ರೀಕೃತವಾಗಿತ್ತು. ಮಾಜಿ ಸಂಸದ, ದಿವಂಗತ ನಟ ಅಂಬರೀಶ್​ ಪತ್ನಿ, ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು.

    MORE
    GALLERIES

  • 27

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    2019ರ ಲೋಕಸಭಾ ಚುನಾವಣೆಯ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ, ದಿವಂಗತ ನಟ ಅಂಬರೀಶ್​ ಅವರ ಪತ್ನಿ, ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಎದುರಾಳಿಯಾಗಿ ಜೆಡಿಎಸ್​ನಿಂದ ನಿಖಿಲ್​ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇವರಿಬ್ಬರ ಪ್ರತಿಸ್ಪರ್ಧಿಯಾಗಿ ಸುಮಲತಾ ಎಂಬ ಹೆಸರಿನ ಇನ್ನಿಬ್ಬರು ಸ್ಪರ್ಧೆ ಮಾಡಿದ್ದರು.

    MORE
    GALLERIES

  • 37

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    ಇದೀಗ ಚುನಾವಣಾ ಆಯೋಗ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳಿಗಳನ್ನು ಅನರ್ಹಗೊಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಸರಿಯಾದ ದಾಖಲಾತಿ ಸಲ್ಲಿಸದ ಹಿನ್ನೆಲೆ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳನ್ನ ಡಿಸ್​ಕ್ವಾಲಿಫೈ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

    MORE
    GALLERIES

  • 47

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    ಅರವಿಂದ ಪ್ರೇಮಾನಂದ, ಎನ್​.ಸಿ ಪುಟ್ಟೆಗೌಡ, ಸುಮಲತಾ ಟಿ.ಎಮ್​​ ಹೊಸುರು, ಎಮ್​. ಸುಮಲತಾ, ಎಸ್​​.ಹೆಚ್​. ಲಿಂಗೇಗೌಡ್​, ಕೆ.ಆರ್​. ಶಿವಮಾದೇಗೌಡ, ಬಿಎಸ್​ ಗೌಡ ಈ ಏಳು ಮಂದಿ ಅನರ್ಹಗೊಂಡಿದ್ದಾರೆ.

    MORE
    GALLERIES

  • 57

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    ಚುನಾವಣಾ ವೆಚ್ಚದ ವಿವರ ಸಲ್ಲಿಸದ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರನ್ನು ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ.

    MORE
    GALLERIES

  • 67

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    2019ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸುಮಲತಾ ಅವರ ಜೊತೆಗೆ ಅವರದೇ ಹೆಸರಿನ ಮೂವರು ಸ್ಪರ್ಧಿಸಿ ಸೋತಿದ್ದರು. ಅವರಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು, ಟಿ.ಎಂ.ಹೊಸೂರು ಗ್ರಾಮದ ಸುಮಲತಾ, ಕೆ.ಆರ್‌.ಪೇಟೆ ತಾಲ್ಲೂಕು ಬಿಲ್ಲೇನಹಳ್ಳಿ ಗ್ರಾಮದ ಎಂ.ಸುಮಲತಾ ಅವರನ್ನು ಅನರ್ಹಗೊಳಿಸಲಾಗಿದೆ.

    MORE
    GALLERIES

  • 77

    Mandya Elections: ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿ ಏಳು ಮಂದಿ ಅನರ್ಹ!

    ಇವರ ಜೊತೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎನ್‌.ಸಿ.ಪುಟ್ಟೇಗೌಡ, ಅರವಿಂದ್‌ ಪ್ರೇಮಾನಂದ್‌ ಅವರನ್ನೂ ಅನರ್ಹಗೊಳಿಸಲಾಗಿದೆ. ಜುಲೈ 7, 2022ರಿಂದ ಅನ್ವಯವಾಗುವಂತೆ ಅನರ್ಹಗೊಳಿಸಲಾಗಿದ್ದು ಜುಲೈ 7, 2025ರವರೆಗೆ 3 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.

    MORE
    GALLERIES