Karnataka Elections: ಶ್ರೀಮಂತಿಕೆಯಲ್ಲಿ ಗಂಡನನ್ನೇ ಮೀರಿಸಿದ ಸಚಿವ ಸುಧಾಕರ್ ಪತ್ನಿ, ಹೀಗಿದೆ ನೋಡಿ ಅವರ ಆಸ್ತಿ ವಿವರ!
ಕರ್ನಾಟಕ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಎಲ್ಲಾ ಪಕ್ಷ ಹಾಗೂ ನಾಯಕರು ಇದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದಾರೆ. ಇನ್ನು ನಿನ್ನೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅನೇಕ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಸದ್ಯ ಡಾ. ಕೆ. ಸುಧಾಕರ್ ಅವರು ಸಲ್ಲಿಸಿರುವ ಅಫಿಡವಿಟ್ ವಿಶೇಷ ಗಮನ ಸೆಳೆದಿದ್ದು, ಇದರ ಅನ್ವಯ ಅವರ ಪತ್ನಿ ಅವರಿಗಿಂತ ಶ್ರೀಮಂತರಾಗಿದ್ದಾರೆ.
ಹೌದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಾಳಯದಿಂದ ಕಣಕ್ಕಿಳಿಯಲು ಡಾ. ಕೆ. ಸುಧಾಕರ್ ಮುಂದಾಗಿದ್ದಾರೆ. ಈಗಾಗಲೇ ಕಮಲ ಪಾಳಯದಿಂದ ಟಿಕೆಟ್ ಪಡೆದಿರುವ ಸುಧಾಕರ್ ನಿನ್ನೆಯೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
2/ 8
ಇನ್ನು ಸಚಿವರು ಸಲ್ಲಿಸಿರುವ ಅಫಿಡವಿಟ್ ಅನ್ವಯ 2.79 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 2.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.60 ಕೋಟಿ ರೂ. ಸಾಲ ತೋರಿಸಿದ್ದಾರೆ.
3/ 8
ಸುಧಾಕರ್ ಪತ್ನಿ ಡಾ. ಜಿ.ಎ. ಪ್ರೀತಿ 6.59 ಕೋಟಿ ರೂ.ಮೌಲ್ಯದ ಚರಾಸ್ತಿ, 16.10 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, ಜತೆಗೆ 19.08 ಕೋಟಿ ರೂ. ಸಾಲ ಹೊಂದಿದ್ದಾರೆ. ಇಬ್ಬರ ಆದಾಯ ಪ್ರಮಾಣವು 5 ವರ್ಷದಲ್ಲಿ ಏರಿಕೆಯಾಗಿದೆ.
4/ 8
ಇನ್ನು 2017-18 ನೇ ಸಾಲಿನಲ್ಲಿ ಸಚಿವರ ಆದಾಯ 14.37 ಲಕ್ಷ ರೂ.ಇತ್ತು. 2021-22ನೇ ಸಾಲಿನಲ್ಲಿ 33.47 ಲಕ್ಷ ರೂ. ಆಗಿದೆ ಎಂಬುವುದು ಉಲ್ಲೇಖನೀಯ. ಇತ್ತ ಅವರ ಪತ್ನಿ ಪ್ರೀತಿ 2017-18ನೇ ಸಾಲಿನಲ್ಲಿ 32.79 ಲಕ್ಷ ರೂ. ಹಾಗೂ 2021-22 ನೇ ಸಾಲಿನಲ್ಲಿ 61.91 ಲಕ್ಷ ರೂ.ಆದಾಯ ತೋರಿಸಿದ್ದಾರೆ.
5/ 8
ಸಚಿವ ಸುಧಾಕರ್ 160 ಗ್ರಾಂ ಚಿನ್ನ ಹಾಗೂ 9 ಕೆಜಿ ಬೆಳ್ಳಿ ಹೊಂದಿದ್ದರೆ, ಪತ್ನಿ ಪ್ರೀತಿ ಬಳಿ 1 ಕೆಜಿ ಚಿನ್ನ, 4 ವಜ್ರದ ಹರಳು, 21 ಕೆಜಿ ಬೆಳ್ಳಿ ಇದೆ. ಇನ್ನು ಸಚಿವರು ತನ್ನ ಪತ್ನಿಯಿಂದ ಸಾಲ ಪಡೆದಿರುವುದಾಗಿಯೂ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
6/ 8
ಅತ್ತ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅಫಿಡವಿಟ್ ಅನ್ವಯ ಅವರ ಆಸ್ತಿ ಮೌಲ್ಯ 152.70 ಕೋಟಿ ರೂ ಆಗಿದೆ.
7/ 8
ಮಲ್ಲಿಕಾರ್ಜುನ್ ಬ್ಯಾಂಕ್ಗಳಲ್ಲಿ 1.56 ಕೋಟಿ ರೂ. ಠೇವಣಿ ಹೊಂದಿದ್ದು, ಷೇರ್, ಡಿಬೆಂಚರ್ ಇತ್ಯಾದಿಗಳಲ್ಲಿ 54.40 ಕೋಟಿ ರೂ. ಹೂಡಿದ್ದಾರೆ. ವಿಮಾ ಪಾಲಿಸಿ, ಎನ್ಎಸ್ಎಸ್ ಇತ್ಯಾದಿಗಳಲ್ಲಿ 4.15 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
8/ 8
ಮಲ್ಲಿಕಾರ್ಜುನ್ ಅವರಿಗೆ 23.60 ಕೋಟಿ ರೂ. ಸಾಲವಿದೆ. 226 ಎಕರೆ ಕೃಷಿ ಭೂಮಿ, 53.02 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿಯಿದೆ. 97.50 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳು, 9.20 ಕೋಟಿ ರೂ. ಮೌಲ್ಯದ ವಸತಿ ಕಟ್ಟಡಗಳಿವೆ.
First published:
18