ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇತ್ತೀಚೆಗಷ್ಟೇ ಹೆಲಿಕಾಪ್ಟರ್ ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿದ್ದರು. ಈ ಬಗ್ಗೆ ವಿವರಿಸಿದ್ದ ಅವರು, ನೋಡ ನೋಡುತ್ತಿದ್ದಂತೆ ಪಕ್ಷಿಯೊಂದು ಹೆಲಿಕಾಪ್ಟರ್ಗೆ ಬಂದು ಡಿಕ್ಕಿ ಹೊಡೆಯಿತು, ನಾನು ಮಾಧ್ಯಮವೊಂದಕ್ಕೆ ಮಾತನಾಡುತ್ತಿದ್ದೆ. ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಶೇಕ್ ಆಯ್ತು. ಮಿಸ್ ಆಗಿದ್ದರೆ ಮತ್ತೆ ನಾವು ಇಂದು ಭೇಟಿ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್ ಹೇಳಿದ್ದರು. (ಸಾಂದರ್ಭಿಕ ಚಿತ್ರ)
ಯಾರು ಒಬ್ಬರನ್ನು ಹಾಳು ಮಾಡಲು ಸ್ವಾತಂತ್ರ್ಯವಿಲ್ಲ, ಯಾರನ್ನು ಉದ್ಧಾರ ಮಾಡಲು ಸ್ವಾತಂತ್ರ್ಯವಿಲ್ಲ ಎಂಬುವುದನ್ನು ನಾವು ಎಲ್ಲರೂ ತತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಇಂತಹ ಸಂದರ್ಭದಲ್ಲಿ ಕೆಟ್ಟ ಕಾಲದಲ್ಲಿ ಕೆಟ್ಟ ಜನರಿಂದ ಏನಾದರೂ ತೊಂದರೆ ಬರುತ್ತಾ ಎಂಬುವುದನ್ನು ವಿಚಾರ ಮಾಡಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.