ಇತ್ತ ಬೆಕ್ಕೊಂದು ಮತಗಟ್ಟೆಯ ಬಳಿ ಬೆಳ್ಳಂ ಬೆಳಗ್ಗೆಯೇ ಬಂದು ಕುಳಿತಿದೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆ ಸಂಖ್ಯೆ 188 ರ ಬಳಿ ಬೆಕ್ಕು ಬಂದು ಕುಳಿತಿದೆ. ಮತದಾರರು ಕೂರಲೆಂದು ಹಾಕಿದ್ದ ಕುರ್ಚಿ ಮೇಲೆ ಬೆಕ್ಕು ಕುಳಿತಿದೆ. ಮತದಾರರು ಬಂದರೂ ಕುಳಿತಲ್ಲಿಂದ ಬೆಕ್ಕು ಎದ್ದಿಲ್ಲ. ಮತದಾರರನ್ನು ಕಂಡು ಹೆದರಿ ಓಡಿ ಹೋಗಿಲ್ಲ. (ಸಾಂದರ್ಭಿಕ ಚಿತ್ರ)
ಇವಿಎಂ ಹಾಗೂ ವಿವಿಪ್ಯಾಟ್ ಗೆ ಪೂಜೆ ಸಲ್ಲಿಸಲು ಆಗಮಿಸಿದ ರೈತ ಸಂಘದ ಮಹಿಳೆಯೋರ್ವರು ಆಗಮಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆ ಪ್ರವೇಶ ಮಾಡುತ್ತಿದ್ದಂತೆ ಮಹಿಳೆಯನ್ನ ಚುನಾವಣಾ ಅಧಿಕಾರಿಗಳು ತಡೆದಿದ್ದಾರೆ. ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲವೆಂದು ಮಹಿಳೆಯನ್ನು ಆಚೆ ಕಳುಹಿಸಲಾಗಿದೆ. ಮಹಿಳೆ ಮತಗಟ್ಟೆಯ ಪ್ರವೇಶ ದ್ವಾರದಲ್ಲೇ ಪೂಜೆ ಸಲ್ಲಿಸಿ ತೆರಳಿದ್ದಾರೆ. ಹಣ್ಣು ಕಾಯಿ ಒಡೆದು ಅರಿಶಿಣ ಕುಂಕುಮವಿಟ್ಟು ಹೂವನ್ನ ಬಾಗಿಲಿಗೆ ಇಟ್ಟು ಪೂಜೆ ಸಲ್ಲಿಸಿ ಮಹಿಳೆ ಮರಳಿದ್ದಾರೆ.