ಬೆಂಗಳೂರು: ಕರ್ನಾಟಕ ಚುನಾವಣೆ ಮೇಲೆ ಯಾಕೋ ಮಳೆರಾಯ ಮುನಿಸಿಕೊಂಡಿದ್ದಾನೆ ಅನ್ಸುತ್ತೆ. ಈ ವರ್ಷದ ಮೊದಲ ಚಂಡಮಾರುತ ಮೋಚಾ ಒಡಿಶಾಗೆ ಅಪ್ಪಳಿಸಲಿದೆ.
2/ 7
ಪೂರ್ವದಲ್ಲಿ ಅಬ್ಬರಿಸ್ತಿರೋ ಮೋಚಾ ಚಂಡಮಾರುತದ ಹೊಡೆತ ಕರ್ನಾಟಕಕ್ಕೂ ಜೋರಾಗೇ ತಟ್ಟಿದೆ. ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ರವಾನೆ ಸಂದರ್ಭದಲ್ಲಿ ಸಮಸ್ಯೆ ಎದುರಾಗುವ ಆತಂಕವಿದೆ.
3/ 7
ಇವತ್ತು ಇಡೀ ದಿನ ಮೋಡಕವಿದ ವಾತಾವರಣ, ಅಲ್ಲಲ್ಲಿ ಜೋರು ಮಳೆ ಆಗ್ತಿದೆ. ನಾಳೆ ಮತ್ತು ನಾಡಿದ್ದು ಮಳೆ ತೀವ್ರತೆ ಹೆಚ್ಚಾಗುತ್ತೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.
4/ 7
ಬೆಂಗಳೂರು, ಉಡುಪಿ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆಯಾಗಲಿದೆ.
5/ 7
ರಾಮನಗರ, ಹೊಸಕೋಟೆ, ಕನಕಪುರ, ರಾಯಚೂರು, ಕೃಷ್ಣರಾಜಸಾಗರ, ಹಾಸನ, ಚಾಮರಾಜನಗರ, ಬೀದರ್, ಮಂಡ್ಯ, ಮೈಸೂರು ಭಾಗದಲ್ಲಿ ಮಳೆ ಜಾಸ್ತಿ ಇರುತ್ತೆ.
6/ 7
ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಟ್ಟಿದ್ದು ಯಾವುದೇ ಘಟನೆಗಳಾದರೂ ಎದುರಿಸಲು ಸಿದ್ಧರಾಗಿರಿ ಅಂತ ಹವಾಮಾನ ಇಲಾಖೆ ವಾರ್ನಿಂಗ್ ಕೊಟ್ಟಿದೆ.
7/ 7
ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ರಾಜಧಾನಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
First published:
17
Rain Alert: ಮತದಾನಕ್ಕೆ ದಿನಗಣನೆ, ಹಲವೆಡೆ ವರುಣನ ರಗಳೆ; ನಾಳೆ-ನಾಡಿದ್ದು ಭಾರೀ ಮಳೆ ಮನ್ಸೂಚನೆ!