ಇತ್ತ ದೂರದ ಸಿಂಗಾಪೂರ್ನಲ್ಲಿರುವ ಕುಮಾರಸ್ವಾಮಿಯನ್ನು ಎರಡು ಪಕ್ಷಗಳ ದೆಹಲಿ ನಾಯಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅತಂತ್ರ ವಿಧಾನಸಭೆ ರಚನೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ನೆರೆವು ಪಡೆಯಲು ದೆಹಲಿ ನಾಯಕರು ಕಸರತ್ತು ನಡೆಸಿದ್ದಾರೆ. ಚುನಾವಣಾ ಭವಿಷ್ಯ ನಿರ್ಧಾರಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಕುಮಾರಸ್ವಾಮಿ ನಿಲುವಿಗೆ ಎರಡು ರಾಷ್ಟ್ರೀಯ ಪಕ್ಷಗಳ ಕಸರತ್ತು ನಡೆಸಿದ್ದಾರಂತೆ. (ಸಾಂದರ್ಭಿಕ ಚಿತ್ರ)