ಹೌದು, ರಾಜಕೀಯ ಎಂಬುವುದು ಹತ್ತಿರದ ಸಂಬಂಧಿಗಳನ್ನು ದೂರ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದ ವ್ಯಕ್ತಿ ತನ್ನ ಅಳಿಯ ಬಿಜೆಪಿ ಪಕ್ಷಕ್ಕೆ ಬಂದರೆ ಮಾತ್ರ, ತನ್ನ ಮಗಳನ್ನು ಗಂಡನ ಮನೆಗೆ ಕಳುಹಿಸುವುದಾಗಿ ಷರತ್ತು ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ನಡೆದಿದೆ. (ಸಾಂದರ್ಭಿಕ ಚಿತ್ರ)
ಈ ಬಗ್ಗೆ ಮಾತನಾಡಿರುವ ಅಳಿಯ ಪರಶುರಾಮ ಚವ್ಹಾಣ, ನಾನು ಕಾಂಗ್ರೆಸ್ ಕಾರ್ಯಕರ್ತ. ಬಿಜೆಪಿಗೆ ಸೇರ್ಪಡೆಯಾಗು, ಮಗಳನ್ನು ಕಳುಹಿಸುತ್ತೇನೆ ಅಂತ ಮಾವ ಹೇಳಿದ್ದಾನೆ. ರಾಜಕೀಯ ಬಿಟ್ಟು ಹೆಂಡತಿ, ಮಕ್ಕಳನ್ನು ಕಳುಹಿಸಿ ನನ್ನ ಪಾಡಿಗೆ ನಾನು ಚೆನ್ನಾಗಿ ಇರುತ್ತೆನೆಂದು ಹೇಳಿದೆ. ಆದರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಮಾವ ಹೇಳ್ತಿದ್ದಾರೆ. ಬೇಡಪ್ಪಾ ಭಿನ್ನಾಭಿಪ್ರಾಯ ಬಿಟ್ಟು, ಬಿಜೆಪಿ ಬಿಟ್ಟು, ಕಾಂಗ್ರೆಸ್ ಬಂದು ಬಿಡು. ಅಳಿಯ- ಮಾವ ಅಂತ ಚೆನ್ನಾಗಿ ಇರೋಣ ಅಂತ ಹೇಳಿದ್ದೀನಿ. ನಾನು ಮಾತ್ರ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.