ಉಳಿದಂತೆ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಪ್ರಧಾನಿ ಮೋದಿಯವರು ಕರ್ನಾಟಕದ ಭೇಟಿ ವೇಳೆ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೋಲಾರ ಸೇರಿದಂತೆ ರಾಜ್ಯದ ಪ್ರಮುಖ 10 ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಚಾರದ ವೇಳಾಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ.
ಇನ್ನು, ಇಂದು ಶಿಗ್ಗಾವಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ ಗಡಿ ಜಿಲ್ಲೆ ಬೀದರ್ಗೆ ಭೇಟಿ ನೀಡಲಿದ್ದಾರೆ. ಭಾಲ್ಕಿ, ಹುಮನಾಬಾದ್‌ನಲ್ಲಿ ಸಾರ್ವಜನಿಕ ಸಮಾವೇಶ ಸಿಎಂ ಭಾಗಿಯಾಗಲಿದ್ದು, ಬೆಳಗ್ಗೆ 10:50ಕ್ಕೆ ಸಮಾವೇಶ ಮತ್ತು 12-30ಕ್ಕೆ ಹುಮಾನಾಬಾದ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿಎಂ ಕಲಬುರ್ಗಿಗೆ ಸಿಎಂ ತೆರಳಲಿದ್ದಾರೆ.