ಬೆಂಗಳೂರು: ಎಲೆಕ್ಷನ್ ಟೈಂನಲ್ಲಿ ಪ್ರಚಾರ, ರೋಡ್ ಶೋ, ಸೆಲೆಬ್ರೇಷನ್‌ಗಳು ಇದ್ದೇ ಇರುತ್ತೆ. ಇಂತಾ ಟೈಂನಲ್ಲಿ ಜನರಿಗೆ ಮತ್ತಷ್ಟು ಉತ್ಸಾಹ ಹೆಚ್ಚಿಸಲು ತಮಟೆ, ಬ್ಯಾಂಡ್ ಸೆಟ್‌ಗಳು ಎಂಟ್ರಿ ಕೊಡುತ್ತೆ. ಇದೇ ಕಾರಣಕ್ಕೆ ಈ ಬಾರಿ ಬ್ಯಾಂಡ್ ಸೆಟ್ ಟೀಂಗಳಿಗೆ ಈಗ ಡಿಮ್ಯಾಂಡ್ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ) (ಧಾರವಾಡದಲ್ಲಿ ತಮಾಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ನಾಯಕರು)
ಈ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಬ್ಯಾಂಡ್ ಸೆಟ್ ಮಾಲೀಕರಾದ ಕೆ ಮಾರಿ, ನಮ್ಮ ಬಳಿ ಮ್ಯೂಸಿಕ್ ಸಿಸ್ಟಮ್, ಬ್ಯಾಂಡ್ ಸೆಟ್ ವ್ಯವಸ್ಥೆ ಇದೆ. ಇಷ್ಟು ದಿನ ಮದುವೆ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವು. ಈಗ ಚುನಾವಣೆ ಸಮಯ ಆಗಿರುವುದರಿಂದ ಎಲೆಕ್ಷನ್ಗೂ ಹೋಗುತ್ತಿದ್ದೇವೆ. ಕಳೆದ ಎರಡು ದಿನಗಳಿಂದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗಿದ್ದೇವು, 10 ರಿಂದ 12 ಕಾರ್ಯಕ್ರಮ ಮಾಡಿದ್ದೀವಿ. ಎಲ್ಲಾ ಪಕ್ಷದವರಿಗೂ ಮಾಡಿದ್ದೀವಿ. ಕೆಲವರು ಕೂಡಲೇ ಹಣ ಕೊಟ್ಟಿದ್ದಾರೆ. ಇನ್ನು ಕೆಲವರು ಕೊಡಬೇಕಿದೆ. ಸದ್ಯ ನಮಗೆ ಬೇಡಿಕೆ ಇದೆ ಎಂದು ಹೇಳಿದ್ದಾರೆ.
ಇನ್ನು, ಬ್ಯಾಂಡ್ ಸೆಟ್ ಮಾಲೀಕರಾದ ಅಶೋಕ್ ಅವರು ಮಾತನಾಡಿ, ನಾಮಿನೇಷನ್ ಪ್ರತಿಕ್ರಿಯೆ ವೇಳೆ ಹೋಗಿದ್ದೇವು. ಇಂತಹ ಸಮಯದಲ್ಲಿ ಲಾಭನೂ ಆಗುತ್ತೆ, ನಷ್ಟನೂ ಆಗುತ್ತೆ. ಆದರೆ ನಮಗೆ ಬೇರೆ ದಾರಿ ಇಲ್ಲ. ಗೊತ್ತಿರುವವರು ಕಡಿಮೆ ಕೊಟ್ಟರೂ ಜಾಸ್ತಿ ಕೊಟ್ಟರೂ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಎಲೆಕ್ಷನ್ ಎನ್ನುವುದು ಕೆಲವರಿಗೆ ಭವಿಷ್ಯದ ಪರೀಕ್ಷೆ, ಆದರೆ ಇನ್ನೂ ಕೆಲವರಿಗೆ ವ್ಯಾಪಾರ. ಮತ್ತು ಕೆಲವರಿಗೆ ಅದು ಬದುಕಾಗಿದೆ. (ಸಾಂದರ್ಭಿಕ ಚಿತ್ರ) (ರಂಜನ್ ಶಿರ್ಲಾಲ್, ನ್ಯೂಸ್18 ಕನ್ನಡ ,ಬೆಂಗಳೂರು)