ಇನ್ನು, ಹೈಕಮಾಂಡ್ ಬಳಿ ಡಿಕೆ ಶಿವಕುಮಾರ್ ಅವರು ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ತಿಳಿಸಿರುವ ಡಿಕೆಶೀ, ನನಗೂ ಬೇಡ, ಸಿದ್ದರಾಮಯ್ಯ ಅವರಿಗೂ ಬೇಡ. ನೀವೇ ಸಿಎಂ ಆಗಿ. ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಂತಾಗಲಿದೆ. ದಲಿರೊಬ್ಬರನ್ನ ರಾಜ್ಯದ ಸಿಎಂ ಮಾಡಿಸಿದ ಪುಣ್ಯ ನನಗೂ ಮತ್ತು ಪಕ್ಷಕ್ಕೂ ಬರಲಿದೆ. ಅಲ್ಲದೆ, ನೀವು ಸಿಎಂ ಆಗುತ್ತೀರಿ ಎಂದರೆ ಎಲ್ಲ ಶಾಸಕರು ಬೆನ್ನಿಗೆ ನಿಲ್ಲುತ್ತಾರೆ. ನಿಮ್ಮ 50 ವರ್ಷದ ನಿರಂತರ ಸೇವೆಗೆ ಗೌರವ ಬಂದಂತಾಗಲಿದೆ ಎಂದು ಡಿಕೆಶಿ ತಿಳಿಸಿದ್ದಾರಂತೆ.