ಬಿಪಿಎಲ್ ಕಾರ್ಡ್‌ರಹಿತ ಮಹಿಳೆಯರು ಯೋಜನೆ ಪಡೆಯುವ ಆಗಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಮುಂದಿನ ದಿನಗಳಲ್ಲಿ ಅವರನ್ನು ಕೂಡ ಪರಿಗಣಿಸುತ್ತೇವೆ. ಕೆಲವರು ಈಗ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರ ಬಳಿ ಬಿಪಿಎಲ್ ಕಾರ್ಡ್ ಇಲ್ಲ, ಅಧಿಕಾರಿಗಳಿಗೆ ಅರ್ಜಿಯನ್ನು ಸುಖಾಸುಮ್ಮನೆ ತಿರಸ್ಕರಿಸುವಂತಿಲ್ಲ ಅಂತ ಕೂಡ ಸೂಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಗೊಂದಲದ ನಡುವೆಯೇ ತಿಂಗಳಿಗೆ ಸರ್ಕಾರದಿಂದ ನಿಮಗೆ 2000 ಬರಬೇಕು ಅಂದರೆ ನೀವೂ ಈ ಕಂಡೀಷನ್ಗಳ ಪಟ್ಟಿಯನ್ನ ಅನುಸರಿಸಲೇ ಬೇಕು. ತೆರಿಗೆ ಪಾವತಿ ಮಾಡೋರಿಗೆ ಸೌಲಭ್ಯ ಸಿಗೋದಿಲ್ಲ, ಮಹಿಳೆ ಪತಿ ತೆರಿಗೆ ಪಾವತಿಸುತ್ತಿದ್ದರೂ ಪತ್ನಿಗೆ ಸಿಗಲ್ಲ, ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ ತಾಯಿಗೆ ಸೌಲಭ್ಯ ಸಿಗೋದಿಲ್ಲ, ಜಿಎಸ್‌ಟಿ ತೆರಿಗೆ ಪಾವತಿದಾರರಿಗೂ ಯೋಜನೆ ಇಲ್ಲ, ಕುಟುಂಬದಲ್ಲಿ ತೆರಿಗೆ ಪಾವತಿದಾರರಿದ್ದಲ್ಲಿ ಸಿಗಲ್ಲ ಎಂಬ ಷರತ್ತುಗಳನ್ನು ಮುಂದಿಟ್ಟಿದೆ.