ಬೆಂಗಳೂರು: ಸಂಪುಟ ಸರ್ಕಸ್‌ಗೆ ಕೆಲಹೊತ್ತಲ್ಲೇ ತೆರೆಬೀಳುವ ನಿರೀಕ್ಷೆ ಇದ್ದು, ಸಿಎಂ, ಡಿಸಿಎಂ, ಹೈಕಮಾಂಡ್ ಕೋಟಾ ಅಡಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ನ್ಯೂಸ್18ಗೆ ಲಭ್ಯವಾಗಿದೆ. 5+5+8 ಸೂತ್ರ ಅಡಿ, ಸಿಎಂ ಸಿದ್ದರಾಮಯ್ಯ ಅವರಿಗೆ 5 ಸಚಿವ ಸ್ಥಾನ ಹಂಚಿಕೆ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ 5 ಹಾಗೂ ಹೈಕಮಾಂಡ್ ಪಾಲಿಗೆ 8 ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸೂತ್ರದಂತೆ ನಾಯಕರು ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಿದ್ದಾರೆ ಎನ್ನಲಾಗಿದೆ.