ಗ್ಯಾರಂಟಿ 01 - ಗೃಹಜ್ಯೋತಿ ಯೋಜನೆಯ ಅಡಿ ಎಲ್ಲಾ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಿಂದ ರಾಜ್ಯ ಬೊಕ್ಕಸದ ಮೇಲೆ ತಿಂಗಳಿಗೆ ಸುಮಾರು 1,200 ಕೋಟಿ ರೂಪಾಯಿ ಅಂದಾಜು ವೆಚ್ಚ ಆಗಲಿದೆ. ಆದರೆ ಈ ಯೋಜನೆ ಬಗ್ಗೆ ಮತ್ತಷ್ಟು ಕ್ಲಾರಿಟಿ ಬೇಕಾಗಿದ್ದು, ಹೆಚ್ಚುವರಿ ಬಳಸಿದರೆ ಬಿಲ್ ಕಟ್ಟಬೇಕಾ? ಎಷ್ಟು ಯೂನಿಟ್ಗೆ ಎಷ್ಟು ಹಣ ಎಂದು ಸರ್ಕಾರ ಇನ್ನು ನಿರ್ಧಾರ ಮಾಡಿಲ್ಲ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ.
ಗ್ಯಾರಂಟಿ 02 - ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ಮನೆಯ ಒಡತಿಗೆ ತಿಂಗಳಿಗೆ 2,000 ರೂಪಾಯಿಯನ್ನು ಮಹಿಳೆಯ ಬ್ಯಾಂಕ್ ಅಕೌಂಟ್ಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಯೋಜನೆ ಎಷ್ಟು ಜನರಿಗೆ ಅನ್ನೋದು ಇನ್ನು ನಿರ್ಧಾರ ಆಗಿಲ್ಲ. ಜನ್ಧನ್ ಖಾತೆ ಹಣ ವರ್ಗಾವಣೆ ಆಗುತ್ತಾ? ಅಥವಾ ಇದಕ್ಕಾಗಿ ಹೊಸ ಖಾತೆ ತೆರೆಯಬೇಕಾ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದೆ.
ಗ್ಯಾರಂಟಿ 05 - ಶಕ್ತಿ ಯೋಜನೆ ಅಡಿ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಯೋಜನೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಪಾಸ್ ವಿತರಣೆ ಮಾಡಲಾಗುತ್ತದೆ. ರಾಜ್ಯದ 4 ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣ ಲಭ್ಯವಿರಲಿದೆ. ಸಾಮಾನ್ಯ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ ಮಾಡಬಹುದಾಗಿದ್ದು, ಕೆಂಪು ಬಸ್ಗಳಲ್ಲಿ ಮಾತ್ರ ಮಹಿಳೆಯರು ಓಡಾಡಬೇಕು. ಉಳಿದಂತೆ ರಾಜಹಂಸ, ಐರಾವತ ಬಸ್ನಲ್ಲಿ ಉಚಿತ ಪಾಸ್ ಇಲ್ಲ.