ನನ್ನದು ಕೊನೆ ಚುನಾವಣೆ, ತುಮಕೂರು ಜಿಲ್ಲೆಗೆ ನೀರಾವರಿ ಕೆಲಸ ಮಾಡಬೇಕು. ಇದೇ ನಂದು ಕೊನೆ ಎಲೆಕ್ಷನ್ ಮಂತ್ರಿ ಆಗಬೇಕು ಅಂತ ಟಿ.ಬಿ ಜಯಚಂದ್ರ ಹೇಳುತ್ತಿದ್ದರೆ, ನಾನು ಒಂಭನೇ ಬಾರಿಗೆ ಶಾಸಕನಾಗಿದ್ದೇನೆ, 10 ಸಿಎಂಗಳ ಜತೆ ಕೆಲಸ ಮಾಡಿದ್ದೇನೆ. ಕೊನೆ ಭಾರಿ ಮಂತ್ರಿ ಆಗಿ ಒಳ್ಳೆ ಕೆಲಸ ಮಾಡಬೇಕೆಂದಿದ್ದೇನೆ . ನಾನು ಸ್ಪೀಕರ್ ಆಗಲ್ಲ ಅಂತಿದ್ದಾರಂತೆ ಆರ್.ವಿ ದೇಶಪಾಂಡೆ. ಇನ್ನು, ರಾಯರೆಡ್ಡಿ ಅವರಿಗೆ ಕೇಳಿದರೂ ನಾನು ಆಗಲ್ಲ ಅಂತಿದ್ದಾರೆ ಎನ್ನಲಾಗಿದೆ. ಮೂವರು ನಾಯಕರು ಮನವಿಗೂ, ಮನವೊಲಿಕೆಗೂ ಬಗ್ಗುತ್ತಿಲ್ಲ ಎನ್ನಲಾಗಿದೆ.