ಉಳಿದಂತೆ ಕಾಂಗ್ರೆಸ್ನ ಹಿರಿಯ ಶಾಸಕರಿಗಷ್ಟೇ ಅಲ್ಲ, ಪ್ರಭಾವಿ ಕಾಂಗ್ರೆಸ್ ಶಾಸಕರನ್ನೂ ಈ ಸಲ ಮಂತ್ರಿ ಮಾಡಬೇಕಾ ಬೇಡ್ವಾ ಅನ್ನೋ ಚರ್ಚೆಗೆ ಬಂದಿದೆ. ಪ್ರಮುಖವಾಗಿ ಐವರನ್ನ 50-50 ಲಿಸ್ಟ್ನಲ್ಲಿಟ್ಟಿದೆ ಹೈಕಮಾಂಡ್. ಕೃಷಿ, ಕಾನೂನು, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣಬೈರೇಗೌಡ (ಬ್ಯಾಟರಾಯನಪುರ), ಜನತಾದಳದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸಂತೋಷ್ ಲಾಡ್ (ಕಲಘಟಗಿ), ಎಂಎಲ್ಸಿ ಶ್ರೀನಿವಾಸ್ ಮಾನೆ (ಹಾನಗಲ್), ಸೊರಬ ಶಾಸಕರಾದ ಮಧು ಬಂಗಾರಪ್ಪ ಮತ್ತು ಉನ್ನತ ಶಿಕ್ಷಣರಾಗಿ ಕಾರ್ಯನಿರ್ವಹಿಸಿದ್ದ ಬಸವರಾಜ್ ರಾಯರೆಡ್ಡಿ (ಯಲಬರ್ಗಾ) ಅವರಿಗೆ ಸಚಿವ ಸ್ಥಾನ ಸಿಗುವ ಅವಕಾಶ 50-50 ರಷ್ಟಿದೆ.